ಉದಯವಾಹಿನಿ, ಕೋಲಾರ: ನಗರದಲ್ಲಿ ಮಾಂಸದ ಅಂಗಡಿಗಳು ನಾಯಿಕೊಡೆಗಳಂತೆ ಯಾವೂದೇ ನೀತಿ ,ನಿಯಮಗಳು ಇಲ್ಲದಂತೆ ತಲೆ ಎತ್ತಿದ್ದು ಕನಿಷ್ಠ ದೇವಾಲಯ ಇದೆ ಎಂಬ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಪರವನಾಗಿ ಗಳನ್ನು ನಗರಸಭೆ ನೀಡಲಾಗಿದೆ ಸಾರ್ವಜನಿಕರು ಅರೋಪಿಸಿದ್ದಾರೆ.
ನಗರದ ಗೌರಿಪೇಟೆಯ ಮೊದಲನೇ ಮುಖ್ಯ ರಸ್ತೆ ಹಾಗೂ ಮೊದಲನೇ ಅಡ್ಡರಸ್ತೆಯಲ್ಲಿರುವ ಬಯಲು ಬಸವೇಶ್ವರ ದೇವಾಲಯದ ಪಕ್ಕದಲ್ಲಿ ಸಾಲಾಗಿ ಮೂರು ಮಾಂಸದ ಅಂಗಡಿಗಳಿಗೆ ಹಾಗೂ ದೇವಾಲದ ಮುಂದಿನ ಸಾಲಿನಲ್ಲಿ ಒಂದು ಅಂಗಡಿ ಮತ್ತು ದೇವಾಲಯದ ಪಕ್ಕದಲ್ಲಿ ಕೋಳಿ ಫಾರಂಗೆ ಕೋಲಾರ ನಗರಸಭೆ ಅರೋಗ್ಯಾಧಿಕಾರಿಯ ಅಡಳಿತ ವೈಖರಿಗೆ ಯಾವೂದೇ ಲಂಗು-ಲಾಗಮು ಇಲ್ಲದೆ ಇರುವುದಕ್ಕೆ ನಿದರ್ಶನವಾಗಿದೆ.
ಬಯಲು ಬಸವೇಶ್ವರ ದೇವಾಲದಲ್ಲಿ ದಿನ ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ, ಬೆಳಗಿನ ಜಾವ ಯೋಗಾಸನ ತರಗತಿ ಮತ್ತು ಬೆಳಗ್ಗೆ ಮಧಾನ್ಯದ ವೇಳೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅಧ್ಯಾಯನ ಕೇಂದ್ರವಾಗಿರುವ ಈ ದೇವಾಲಯದ ಸುತ್ತ ಚಿಕನ್, ಮಟನ್ ಅಂಗಡಿಗಳ ಜೂತೆಗೆ ಕೋಳಿಫಾರಂಗೆ ಪರವನಾಗಿ ನೀಡುವ ಮೂಲಕ ವ್ಯಾಪಕವಾದ ವಾಯು ಮಾಲಿನ್ಯ ಉಂಟಾಗಿದೆ. ಸಾರ್ವಜನಿರು ಈ ರಸ್ತೆಯಲ್ಲಿ ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ದೇವಾಲಯದ ಪಕ್ಕದಲ್ಲಿರುವ ಕೋಳಿಫಾರಂ ಹಿಂಬಾದ ರಸ್ತೆಯಲ್ಲಿ ಬಾಲಾಜಿ ನರ್ಸ್ಸರಿ ಶಾಲೆ, ರವಿ ವಿದ್ಯಾ ಸಂಸ್ಥೆ ಹಾಗೂ ಗಣೇಸ್ ಹೆಲ್ತ್ ಕೇರ್ ಹಾಗೂ ಸುತ್ತಮುತ್ತಲು ಸಾರ್ವಜನಿಕ ಮನೆಗಳಿವೆ ಎಂಬ ಪರಿಜ್ಞಾನ ಇಲ್ಲದೆ ನಗರಸಭೆಯ ಆರೋಗ್ಯ ಅಧಿಕಾರಿ ಸ್ಥಳ ಪರಿಶೀಲನೆ ಮಾಡದೆ ಮಾಂಸದ ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ
