???????

ಉದಯವಾಹಿನಿ, ಅಫಜಲಪುರ: ತೋಟದ ಮನೆಗಳಿಗೆ ಸಿಂಗಲ್ ಪೇಸ್ ವಿದ್ಯುತ್, ಮತ್ತು ರೈತರಿಗೆ ಬೆಳೆ ಪರಿಹಾರ ಕೊಡುವುದರ ಕುರಿತು,ಮತ್ತು ಮಹಾರಾಷ್ಟ್ರದ ಉಜನಿ ಜಲಾಶಯದಿಂದ  ಭೀಮ ನದಿಗೆ ನೀರು ಬಿಡಬೇಕು. ಎಂದು ಜೆಡಿಎಸ್ ಮುಖಂಡರು,ಕಾರ್ಯಕರ್ತರು ಸೇರಿಕೊಂಡು ಉರುಳು ಸೇವೆ ಮಾಡುವ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ನಂ.6 ರಂದು ಸಲ್ಲಿಸುವುದು ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ್ ಬಡಿದಾಳ ಅವರು ತಿಳಿಸಿದ್ದಾರೆ. ನಂತರ ಮಾತನಾಡಿದ ಅವರು ಹಲವಾರು ವರ್ಷಗಳಿಂದ ತೋಟದ ಮನೆಗಳಿಗೆ ಸಿಂಗಲ್ ಪೇಸ್ ವಿದ್ಯುತ್ ಕೊಡಬೇಕೆಂದು ಹೋರಾಟಗಳು ನಡೆದಿದ್ದವು. ಆಗಿನ ಸರ್ಕಾರ ರೈತರಿಗೆ ಮರಳು ಮಾಡಿ ಸರ್ವೇ ಕಾರ್ಯ ಮಾಡಿದ ಮೇಲೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿ ರೈತರಿಗೆ ವಂಚನೆ ಮಾಡಿದ್ದಾರೆ. ನಾವು ಪದೇ ಪದೇ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ ತೋಟದ ಮನೆಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸದ ತೊಂದರೆಯಾಗುತ್ತಿದ್ದು,ಮತ್ತು ರೈತರಿಗೆ ಎಣ್ಣೆ ಸಿಂಪಡಣೆ ಮಾಡುವ ಯಂತ್ರ ಮಷೀನ್ ಗಳ ಚಾರ್ಜಿಂಗ್ ಬ್ಯಾಟರಿಗಳ ಚಾರ್ಜ್ ಮಾಡಲು ಅವಶ್ಯಕತೆ ಇರುವುದರಿಂದ. ಹಾಗೂ ವಿಷಜಂತುಗಳು,ಹಾವುಗಳು ಹೆಚ್ಚಾಗಿ ರಾತ್ರಿ ಹೊತ್ತಲ್ಲೇ ಹೊರಗಡೆ ಬರುವುದರಿಂದ ಈಗಾಗಲೇ ಎಷ್ಟೋ ಜನ ಹಾವು ಕಚ್ಚಿಸಿಕೊಡು ಮರಣ ಹೊಂದಿದ್ದಾರೆ. ಎಷ್ಟೊ ರೈತ ಕುಟುಂಬಗಳು ಬೀದಿಪಾಲಾಗಿದ್ದಾರೆ.ಅದಕ್ಕಾಗಿ ಪದೇ ಪದೇ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ,ರೈತರ ತೋಟದ ಮನೆಗಳಿಗೆ ಸಿಂಗಲ್ ಪೇಸ್ ವಿದ್ಯುತ್ ಒದಗಿಸಬೇಕಾಗಿ ಎಚ್ಚರಿಕೆ ನೀಡುತ್ತಿದ್ದೇವೆ.ಮಹಾರಾಷ್ಟ್ರದ ಉಜನಿ ಡ್ಯಾಮ್ ನಿಂದ 5 ಟಿಎಂಸಿ ನೀರನ್ನ ಭೀಮಾ ನದಿಗೆ  ಹರಿಸಬೇಕು.ಅಪಜಲಪುರ ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸುತ್ತಾ.ಈಗಾಗಲೇ ಹಿಂದಿನ ಸರ್ಕಾರಗಳು ತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಿ ರೈತರಿಗೆ ಒಂದು ಬಿಡಿಗಾಸು ಪರಿಹಾರ ಕೊಡಲಿಲ್ಲ. ತಾಲೂಕಿನ ರೈತರು ಸಾಲ-ಸೂಲ ಮಾಡಿಕೊಂಡು ಬಿತ್ತನೆ ಕಾರ್ಯ ಮುಗಿಸಿದ್ದಾರೆ.ಮಳೆ ಬಾರದೆ ಇರುವುದರಿಂದ ರೈತರ ಬೆಳೆಗಳು ಸಂಪೂರ್ಣವಾಗಿ  ಒಣಗಿ ಹೋಗುತ್ತಿದೆ ಅದಕ್ಕೆ ಸರ್ಕಾರ ತಕ್ಷಣ ರೈತರ ಖಾತೆಗಳಿಗೆ ಪ್ರತಿ ಎಕರೆಗೆ 3೦,೦೦೦/- ರೂ.ಯಂತೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ಮತ್ತು  ಕಲಬುರಗಿ ಹೈಕೋರ್ಟ್ ನಿಂದ ಅಫಜಲಪುರಕ್ಕೆ ಬರುವ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹಾಳಾಗಿದ್ದು ಈಗಾಗಲೇ ಸಾವಿರಾರು ಅಪಘಾತಗಳು ಸಂಭವಿಸಿ ಕುಟುಂಬಗಳು ಬೀದಿಗೆ ಬಿದ್ದಿವೆ.ಇದರಿಂದ ತಕ್ಷಣ ರಾಜ್ಯ ಹೆದ್ದಾರಿಯನ್ನು ದುರಸ್ತಿ ಮಾಡಬೇಕು. ಇವೆಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು  ನಂ.೬ ರಂದು ಸೋಮವಾರ ಬೆಳಗ್ಗೆ 11.ಗಂಟೆಗೆ ಕಲಬುರಗಿಯ ತಿಮ್ಮಾಪುರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಉರುಳು ಸೇವೆ ಮಾಡುವ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನ ಸಲ್ಲಿಸಲಾಗುವುದು ಎಂದು ರಾಜಕುಮಾರ ಬಡದಾಳ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇದೇ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!