ಉದಯವಾಹಿನಿ, ಇಂಡಿ:  ನಗರದ ಹೊರವಲಯದಲ್ಲಿರುವ ಕೃಷಿ ವಿಜ್ಞಾನಕೇಂದ್ರದಲ್ಲಿ ರಾಷ್ಟೀಯ  ಕೃಷಿ ವಿಕಾಸ ಯೋಜನೆಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಹವಾಮಾನ ಘಟಕವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ಡಾ. ಪಿ.ಎಲ್.ಪಾಟೀಲ್ ಉದ್ಘಾಟಿಸಿದರು.ಕುಲಪತಿ ಪಾಟೀಲರು ಮಾತನಾಡಿ ಹವಾಮಾನ ವೈಪರೀತ್ಯದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚಾಗಿದೆ, ಮಳೆ ಸರಿಯಾಗಿ ಬರುತ್ತಿಲ್ಲ, ಇದರಿಂದ ರೈತರು ಸಂಕಷ್ಠದಲ್ಲಿದ್ದಾರೆ. ಇಂತಕ ಪರಿಸ್ಥಿತಿಯಲ್ಲಿ  ರೈತರಿಗೆ ಮುಂಚಿತವಾಗಿ ಹವಾಮಾನ ಮಾಹಿತಿ ಪಡೆಯಲು ಘಟಕವು ಸಹಾಯವಾಗಲಿದೆ ಎಂದರು.
     ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರು ಡಾ. ಬಿ.ಡಿ.ಬಿರಾದಾರ ಮಾತಾನಾಡಿ ಘಟಕದಲ್ಲಿ ಬಾಷ್ಟೀಭವನತಟ್ಟೆ, ಸ್ವಯಂಚಾಲಿತ ಮಳೆ ಮಾಪಕ,ಸ್ಟಿವೆನ್‌ಸನ್ ಪರದೆಯಲ್ಲಿ(ಗರಿಷ್ಠ ಮತ್ತು ಕನಿಷ್ಠ ತಾಪಮಾನ ಥರ್ಮಾಮೀಟರಗಳು ಮತ್ತುಆರ್ದ್ರ ಮಾಪಕ), ಗಾಳಿಯ ವೇಗಮಾಪಕ, ಗಾಳಿಯ ದಿಕ್ಸೂಚಿ, ಬಿಸಿಲು ಅವಧಿ ಮಾಪಕ ಮತ್ತುಸ್ವಯಂಚಾಲಿತ ಹವಾಮಾನ ಘಟಕಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಹವಾಮಾನ ಮಾಹಿತಿ ಪಡೆಯಲುರೈತ ಬಾಂಧವರಿಗೆ ಬಹು ಉಪಯೋಗವಾಗಲಿದೆಎಂದರು.ಡಾ.ಸವಿತಾ ಬಿ, ಮಣ್ಣು ವಿಜ್ಞಾನಿ ಮತ್ತು ಪ್ರಧಾನ ಸಂಶೋಧಕರು ಮಾತನಾಡಿ ಈ ಹವಾಮಾನ ಘಟಕವುರಾಷ್ಟ್ರೀಯ  ಕೃಷಿ ವಿಕಾಸ ಯೋಜನೆಯಲ್ಲಿ ಸ್ಥಾಪಿಸಲಾಗಿದೆ ಇದರಸದುಪಯೋಗ ಎ¯್ಲ್ದುಕೊಳ್ಳಬೇಕೆಂದರೆ . ಹವಾಮಾನ ಘಟಕ ಸ್ಥಾಪನೆಯಿಂದರೈತರಿಗೆ ಮುಂಚಿತವಾಗಿ ಮೋಡಕವಿದ ವಾತಾವರಣ, ಮಳೆ ಬರುವ ಮನ್ಸೂಚನೆಗಳನ್ನು ತಿಳಿದು ಬೆಳೆ ಸಂರಕ್ಷಣಾ ಕ್ರಮಗಳನ್ನು ಮಾಡಿಕೊಳ್ಳಬಹುದೆಂದು ಡಾ. ಆರ್. ಬಿ. ಬೆಳ್ಳಿ, ಸಹ ವಿಸ್ತರಣಾ ನಿರ್ದೇಶಕರು, ವಿಜಯಪುರ ತಿಳಿಸಿದರು. ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರು ಡಾ.ಶಿವಶೆಂಕರಮೂರ್ತಿ ಇವರು ಈ ಹವಾಮಾನಘಟಕದ ಮಾಹಿತಿಯಿಂದರೈತರಿಗೆಔಷಧಿ ಸಿಂಪರಣೆ ಮಾಡಲು ಸಹವಾಗಲಿದೆ ಮತ್ತು ವೆಚ್ಚ ಸಹ ಉಳಿತಾಯವಾಗಲಿದೆ ಎಂದರು. ಈ ಕಾರ್ಯದಲ್ಲಿ ಆಸ್ತಿ ಅಧಿಕಾರಿ ಮಿರಜಕರ, ವಿದ್ಯಾಧಿಕಾರಿಡಾ. ಆರ್.ಕೆ. ಕಾಳಪ್ಪನವರ,  ಬಿ.ಡಿ. ಚವ್ಹಾಣ, ಪ್ರಾದ್ಯಾಪಕಿ ಡಾ. ಕಾಶಿಬಾಯಿ ಖೇಡಗಿ,  ವಿಜ್ಞಾನಿಗಳಾದ ಪ್ರಕಾಶ ಜಿ, ವೀಣಾಚಂದಾವರಿ,  ವಿವೇಕ, ಧನಲಕ್ಷಿ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!