
ಉದಯವಾಹಿನಿ, ಇಂಡಿ :ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಮುಖ್ಯ ಕಾಲುವೆಗೆ ನೀರು ಬಿಡಬೇಕೆಂದು ಆಗ್ರಹಿಸಿ ಮಿನಿ ವಿಧಾನಸೌಧ ಎದುರು ರೂಗಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ಮುತ್ತಪ್ಪ ಪೋತೆ ಮಾತನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಅನ್ನದಾತನ ಮೇಲೆ ನಿಲ್ಲದ ಗದಾ ಪ್ರಹಾರ ಮಾಡುತ್ತಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆಯ ರಾಯಚೂರ,ಯಾದಗಿರಿ ಜಿಲ್ಲೆಯಲ್ಲಿ ವಾರಾಬಂದಿ ಮಾಡದೇ ಕೇವಲ ವಿಜಯಪುರ ಜಿಲ್ಲೆಯವರಿಗೆ ಮಾತ್ರ ವಾರಾಬಂದಿ ಮಾಡಿರುವದು ಖಂಡನೀಯ. ಒಂದು ವೇಳೆ ಕಾಲುವೆಗೆ ನೀರು ಹರಿಸದಿದ್ದರೆ ರೂಗಿ ಗ್ರಾಮವನ್ನು ಮತ್ತೆ ಬಂದು ಮಾಡಿ ಹೋರಾಟ ಮಾಡಲಾಗುವದೆಂದು. ಬಸವರಾಜ ಹಂಜಗಿ ಮಾತನಾಡಿ ತಾಂಬಾ ಗ್ರಾಮದಲ್ಲಿ ರೈತರು 450 ದಿನಗಳ ವರೆಗೆ ಹೋರಾಟ ಮಾಡಿದರೂ ಅಧಿಕಾರಿಗಳು ಕಾಲುವೆಗೆ ನೀರು ಹರಿಸಿರುವದಾಗಿ ಸುಳ್ಳು ಹೇಳಿದರು. ಈಗ ಭೀಕರ ಬರಗಾಲವಿದ್ದರೂ ಮತ್ತೆ ಅದೇ ರೀತಿಯ ಸುಳ್ಳು ಹೇಳುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ತಡಲಗಿ,ಬಸುಗೌಡ ಹಂಜಗಿ,ಧರೆಪ್ಪ ಮೇತ್ರಿ,ಕೆಂಚಪ್ಪ ನಿಂಬಾಳ,ರಮೇಶ ದಳವಾಯಿ,ರವಿ ಶಿವೂರ,ಸುರಪ್ಪ ಅಗಸರ ಮತ್ತಿತರಿದ್ದರು. ಪ್ರತಿಭಟನಾಕಾರರ ಜೊತೆ ಮಾತನಾಡಿದ ತಹಸೀಲ್ದಾರ ಬಿ.ಎಸ್.ಕಡಕಬಾವಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿ ಕಚೇರಿಗೆ ಕರೆಯಿಸಿದರು.
ಈ ಮಧ್ಯೆ ಅಭಿಯಂತರ ರವಿಕುಮಾರ ಕುಲಕಣ ಸ್ಥಳಕ್ಕೆ ಬಂದು ಹೋರಾಟ ಮಾಡುವವರನ್ನು ಗೋರನಾಳ ಗ್ರಾಮದ ಹತ್ತಿರದ 125 ಕಿ.ಮಿ ಗೇಟ ತೆಗೆದು ನೀರು ಬಿಡುವದಾಗಿ ತಿಳಿಸದರು.
