
ಉದಯವಾಹಿನಿ, ಮಸ್ಕಿ: ಪಟ್ಟಣದ 11ಕೆವಿ ಲಿಂಕ್ ಲೈನ್ ನಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನ.6 ಮತ್ತು ನ.7ರಂದು ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವೆಂಕಟೇಶ ಅವರು ತಿಳಿಸಿದ್ದಾರೆ. ಎರಡು ದಿನಗಳ ಕಾಲ ಕಾಮಗಾರಿ ನಡೆಯುತ್ತಿದ್ದು, ಮಸ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪಂಪಸೆಟ್ ಲೈನನಲ್ಲಿ 12ಗಂಟೆಯಿಂದ 5.30ರವರೆಗೆ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯ ಉಂಟಾಗಲಿದೆ, ರೈತ ಬಾಂಧವರು, ಸಾರ್ವಜನಿಕರು ಸಹಕರಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
