
ಉದಯವಾಹಿನಿ, ಮುದಗಲ್ಲ : ಲಿಂಗಸಗೂರು ತಾಲೂಕಿನ ಮುದಗಲ್ ಪುರಸಭೆ ವ್ಯಾಪ್ತಿಗೆ ಒಳಪಡುವ ಪ್ರಸ್ತುತ ಸಾಲಿನಲ್ಲಿ ಎಸ್.ಎಫ್.ಸಿ ಯೋಜನೆಯ ಅಡಿಯಲ್ಲಿ ಮುದಗಲ್ (ಜಾಲ್ಡರಪೇಟೆ) ಯ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದ ಸುತ್ತಲೂ ಕಂಪೌಂಡ ಗೋಡ ನಿರ್ಮಾಣ ಕಾಮಗಾರಿಯ ಅಂದಾಜು ಪತ್ರಿಕೆಯನ್ನು ಸರಕಾರದ ನಿಯಮಾನು ಸಾರ ತಯಾರಿಸಿದ್ದು ಇರುತ್ತದೆ.ಇಲ್ಲಿ ಕಾಮಗಾರಿ ಕೈಗೊಳ್ಳಬೇಕಾದ ಕಿರಿಯ ಇಂಜಿನಿಯರ್ ಮತ್ತು ಗುತ್ತೇದಾರರು ಶ್ಯಾಮೀಲಾಗಿ ಸದರಿ ಕಾಮಗಾರಿಯ ಅಂದಾಜು ಪತ್ರಿಕೆಯ ಪ್ರಕಾರ ದೊಡ್ಡ ಮೊತ್ತದ ಅನುದಾನ ಇದ್ದರೂ ಕೂಡಾ ಯಾವುದೇ ಕಾಲಂ ಗುಂಡಿಗಳನ್ನು ಸರಿಯಾದ ಅಳತೆಯ ಮಟ್ಟದಲ್ಲಿ ಒಳಗಡೆ ಡಿಗ್ಗಿಂಗ ಮಾಡಿ ರುವುದಿಲ್ಲ.. ಕೇವಲ ಕಾಲಂ ಗಳನ್ನು ನೆಲದ ಮೇಲೆ ಹಾಕಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಮತ್ತು ಕಟ್ಟಡ ನಿರ್ಮಿಸುವ ಸಮಯದಲ್ಲಿ ತಳಪಾಯ ವನ್ನು ಅಡ್ಡದೇ ನೆಲದ ಮೇಲಿಂದ ಕಟ್ಟಡ ಪ್ರಾರಂಭಿಸಿದ್ದಾರೆ.ಕಾಮಗಾರಿಗೆ ಬಳಕೆ ಮಾಡಿದ ಉಸುಗು ಕಳಪೆಮಟ್ಟದಿಂದ ಕೂಡಿದೇ ಮಣ್ಣು ಮಿಶ್ರಿತ ಉಸುಕು ಬಳಕೆ ಮಾಡಿರುತ್ತಾರೆ. ಅಲ್ಲಿಯ ಸಾರ್ವಜನಿಕರು ನಮ್ಮ ಸಂಘಟನೆಯ ಗಮನಕ್ಕೆ ತಂದಾಗ ಸದರಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿರುವ ವಿಷಯ ತಿಳಿದ ತಕ್ಷಣ ನಮ್ಮ ಸಂಘಟನೆಯವರು ಸದರಿ ಕಾಮಗಾರಿಯ ಸ್ಥಳಕ್ಕೆ ಹೋಗಿ ಸ್ಥಾನಿಕ ನೋಡಲಾಗಿ ಕಳಪೆಮಟ್ಟದಿಂದ ಕಾಮಗಾರಿಯನ್ನು ತಯಾರಿಸಿರುವದು ಕಂಡು ಬಂದಿರುತ್ತದೆ. ಮನವಿ ದೂರನ್ನು ಕೈಗೆತ್ತಿಕೊಂಡು ಕಾಮಗಾರಿಯ ಬಿಲ್ಲನ್ನು ತಡೆಹಿಡಿದು ಸರಕಾರದ ನಿಯಮಾನುಸಾರ ತಯಾರಿಸಿದ ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ಕೈಗೊಳ್ಳುವವರೆಗೂ ಇದರ ಬಿಲ್ಲು ತಡೆಹಿಡಿಯಬೇಕು. ಒಂದು ವೇಳೆ ಈ ನಮ್ಮ ಮನವಿ ದೂರನ್ನು ಕಡೆಗಣಿಸಿ ಬಿಲ್ಲು ಮಂಜೂರು ಮಾಡಲು ಮುಂದಾದರೆ, ಸದರಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಕಾಮಗಾರಿಯ ಅನುಮತಿ ಪತ್ರವನ್ನು ಕಪ್ಪುಪಟ್ಟಿಗೆ ಕಿ.ಇಂ.ಗಳನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು. ಮತ್ತು ಗುತ್ತೇದಾರರ ಸೇರಿಸಬೇಕು.ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ಮುಂದುವರಿಯದಂತೆ ಈ ಹಿಂದಿನ ಕಾಮಗಾರಿಯನ್ನು ಅಂದಾಜು ಪತ್ರಿಕೆಯ ಪ್ರಕಾರ ಕೈಗೊಳ್ಳುವವರೆಗೂ ಮುಂದಿನ ಕಾಮಗಾರಿಗೆ ಅವಕಾಶ ಮಾಡಿಕೊಡ ಬಾರದು ಮತ್ತು ಯಾವುದೇ ಕಾರಣಕ್ಕೂ ಬಿಲ್ಲು ಮಂಜೂರಾತಿ ಮಾಡ ಬಾರದೆಂದು ಸಂಘಟನೆಯು ಒತ್ತಾಯಿಸಿದ್ದಾರು.
ಈ ಸಂದರ್ಭದಲ್ಲಿ :ಪರುಶುರಾಮ ಮುದಗಲ್ಲ, ಶಶಿಕುಮಾರ್, ಚನ್ನಬಸವ ಮುದಗಲ್ಲ ,ಮಾರುತಿ, ಹಾಗೂ ಇತರರು ಉಪಸ್ಥಿತರಿದ್ದರು.
