
ಉದಯವಾಹಿನಿ, ಮಸ್ಕಿ: ಕಾಂಗ್ರೆಸ್ ಮುಖಂಡ ಪ್ರಸಾದ ಮದ್ಲಾಪೂರ ಹತ್ಯೆಗೈದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಇಲ್ಲಿನ ಡಿ ಎಸ್ ಎಸ್ ಮುಖಂಡರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಟ್ಟಣದ ತಹಶೀಲ್ದಾರ ಕಚೇರಿ ಮುಂದೆ ಕೆಲ ಕಾಲ ಪ್ರತಿಭಟಿಸಿ ಅಕ್ರೋಶ ಹೊರ ಹಾಕಿದರು. ಡಿಎಸ್ಎಸ್ ತಾಲೂಕ ಘಟಕ ಅಧ್ಯಕ್ಷ ಜಮದಗ್ನಿ ಗೋನಾಳ ಅವರು ಮಾತನಾಡಿ, ಈಚೆಗೆ ದಲಿತರ ಮೇಲಿನ ಹಲ್ಲೆ, ದೌರ್ಜನ್ಯ, ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ.ದಲಿತರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮಾನ್ವಿ ತಾಲೂಕಿನ ಮದ್ಲಾಪೂರ ಗ್ರಾಮದ ಪ್ರಸಾದ ಎಂಬ ದಲಿತ ಮುಖಂಡನ ಮೇಲೆ ಹಾಡುಹಗಲೆ ಭರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೈದಿರುವ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಹತ್ಯೆಗೊಳಗಾದ ಕುಟುಂಬಕ್ಕೆ 50ಲಕ್ಷ ಪರಿಹಾರ ನೀಡಬೇಕು, ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು, ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಸಿದ್ದು ಉದ್ಬಾಳ, ಅನಿಲಕುಮಾರ ಉದ್ಬಾಳ,ಮರಿಸ್ವಾಮಿ ಮುದಬಾಳ,ಮಲ್ಲಿಕ್ ಕೋಠಾರಿ, ಕನಕಪ್ಪ ಕುಣಿಕೆಲ್ಲೂರು, ಮಹೇಶಕುಮಾರ ಅಂತರಗಂಗಿ,ಸುಭಾಸ ಹೀರೆಕಡಬೂರು ಸೇರಿದಂತೆ ಇನ್ನಿತರಿದ್ದರು.
