ಉದಯವಾಹಿನಿ, ದೇವದುರ್ಗ:ಜಿಲ್ಲಾಡಳಿತ ನೀಡಲ್ಪಡುವ ಎಡದೊರೆ ಸಾಧನಾ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ನರಸಿಂಗರಾವ್ ಸರಕೀಲ್‌ರಿಗೆ ಪಟ್ಟಣದ ಗ್ರಂಥಾಲಯ ಸಭಾಂಗಣದಲ್ಲಿ ಸರಕಾರಿ ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಮಲ್ಲಯ್ಯ ಅತ್ತನೂರು ಹಾಗೂ ಮಿತ್ರರು ಶನಿವಾರ ಸನ್ಮಾನಿಸಿದರು.
ಈಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಎಚ್.ಶಿವರಾಜ,ಮಾಜಿ ಅಧ್ಯಕ್ಷ ಬಸವರಾಜ ಬ್ಯಾಗವಾಟ,ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮೈನುದ್ದೀನ್ ಕಾಟಮಳ್ಳಿ,ಯುವಕವಿ ರವಿ ರಾಯಚೂರಕರ್,ಗ್ರಂಥಪಾಲಕ ಹನುಮಂತ ಅಂಚೆಸೂಗೂರ,ಗುರುನಾಥ ಇಂಗಳದಾಳ,ಗುತ್ತೇದಾರ ಬಸವರಾಜ ಪಾಟೀಲ್ ಪರ್ತಪೂರ,ಪತ್ರಕರ್ತರಾದ ಅಂಜಳ ಹಸನ್, ಬಂದೇನವಾಜ್ ನಾಗಡದಿನ್ನಿ ಹಾಗೂ ಇತರರು ಇದ್ದರು.
