
ಉದಯವಾಹಿನಿ,ಚಿಂಚೋಳಿ: ಕಲಬುರ್ಗಿ ಪಂಡಿತ್ ರಂಗಮಂದಿರದಲ್ಲಿ ನ.18-19ರಂದು ಉಚಿತ ನಾಟಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಮಾಡುವ ರಂಗ ಸುವರ್ಣ ಪ್ರಶಸ್ತಿಗೆ ತಾಲ್ಲೂಕಿನ ಚಂದ್ರಶೇಖರ ಲಕ್ಕಶೇಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರತಿ ವರ್ಷದಂತೆ ಈ ವರ್ಷವು ರಂಗಮಿತ್ರ ನಾಟ್ಯ ಸಂಘದಿಂದ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಕಲಾವಿದರನ್ನು ಹುಡುಕಿ ಗುರುತಿಸುವ ಕಾರ್ಯ ಮಾಡುತ್ತಾ ಎರಡುದಿನ ನಾಟಕೋತ್ಸವ ಆಯೋಜಿಸಲಾಗಿದೆ.ಪ್ರತಿಭೆಗೊಂದು ರಂಗ ವೇದಿಕೆ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯಲಿದೆ,ಇದರಲ್ಲಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನ ಒಬ್ಬರಿಗೆ ರಂಗಭೂಮಿ ಕಲೆ ಆರಾಧಕರನ್ನು ಗುರುತಿಸಿ ಅವರಿಗೆ ರಂಗ ಸುವರ್ಣ ಪ್ರಶಸ್ತಿ ಜೋತೆಗೆ 5ಗ್ರಾ.ಚಿನ್ನ ನೀಡಲಾಗುತ್ತಿದೆ.ನಾವು ಕಳೆದ 20-25 ವರ್ಷಗಳಿಂದ ರಂಗಭೂಮಿ ಕಲಾವಿದರನ್ನು ಗುರುತಿಸಿ ಅವರನ್ನು ಗೌರವಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಇಂಥಹ ಕಾರ್ಯವನ್ನು ರಾಜ್ಯ ಸರ್ಕಾರಗಳು ಮಾಡಿ ರಂಗಭೂಮಿ ಕಲಾವಿದ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಬೇಕು ಆದರೆ ಮಾಡುತ್ತಿಲ್ಲಾವೆಂದು ಬೇಸರ ಸಂಗತಿಯಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಹಾಸ್ಯ,ವಿಲನ್,ಅಲ್ರೋಂಡರ್ ಕಲೆವುಳ್ಳವರು ಏಲೆಮರಿ ಕಾಯಿಯಂತೆ ಬಹಳಷ್ಟು ಜನರು ತಮ್ಮ ತಮ್ಮ ಕಲಾವುಳ್ಳವರಿದ್ದಾರೆ ಅಂಥವರಿಗೆ ಗುರುತಿಸಿ ರಂಗ ಸುವರ್ಣ ಪ್ರಶಸ್ತಿ ಐದು ಗ್ರಾಂ.ಚಿನ್ನ ಜೋತೆ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡುತ್ತಿದ್ದೇವೆ.ಕಲಾವಿದರನ್ನು ಉಳಿಸಬೇಕು ಬೆಳೆಸಬೇಕು ಎಂಬ ದೃಷ್ಟಿಯಲ್ಲಿ ಇಂಥಹ ದೊಡ್ಡ ಕಾರ್ಯಕ್ರಮ ಪ್ರತಿವರ್ಷ ಮಾಡುತ್ತಾ ಬರುತ್ತಿದ್ದೇವೆ.ನ.18ರಂದು ತಾಳಿ ಹರಿಯಲಿಲ್ಲಾ ಶೀಲಾ ಉಳಿಯಲಿಲ್ಲಾ ಮತ್ತು ಮಗ ಹೋದರು ಮಾಂಗಲ್ಯ ಬೇಕು ಎಂಬ ಸುಂದರ ನಾಟಕವನ್ನು ಉಚಿತವಾಗಿ ಹಮ್ಮಿಕೊಂಡಿದ್ದೇವೆ ನಾಟಕದಿಂದ ಸಮಾಜವನ್ನು ಪರಿವರ್ತನೆ ಮಾಡಬಹುದು.ಈ ಕಾರ್ಯಕ್ರಮದಲ್ಲಿ ಮಠಾಧೀಶರು,ವಿವಿಧ ಪಕ್ಷಗಳ ರಾಜಕೀಯ ಮುಖಂಡರು,ಸಮಾಜ ಚಿಂತಕರು,ಕವಿಗಳು,ರಂಗಭೂಮಿ ಕಲಾವಿದರು ಭಾಗಿಯಾಗಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಕವಿ ಶಂಕರಜೀ ಹೂವಿನಹಿಪ್ಪರಗಿ,ಲಕ್ಷ್ಮಣ ಆವುಂಟಿ,ರಾಜರೆಡ್ಡಿ,ರವಿಪಾಟೀಲ,ಚಂದ್ ರಶೇಖರ ಲಕ್ಕಶೇಟ್ಟಿ,ಶಿವಕುಮಾರ ಹಿರೆಮಠ,ಗೋಪಾಲ ಭಾಜಪಳ್ಳಿ,ಪ್ರಶಾಂತ,ಶ್ರೀಧರ ವಗ್ಗಿ,ಖನ್ನಾ,ಅನೇಕರಿದ್ದರು.
