ಉದಯವಾಹಿನಿ,ಕೋಲಾರ: ಮುಳಬಾಗಿಲಿನ ದೊಡ್ಡಭದ್ರೇಗೌಡ ಆಸ್ಪತ್ರೆ ಮುಂಭಾಗ ನಿಲ್ಲಿಸಿದ್ದ ಆಕ್ಸಿಸ್ ಸ್ಕೂಟಿ ಡಿಕ್ಕಿಯನ್ನು ಓಪನ್ ಮಾಡಿ ಇಬ್ಬರು ಕಳ್ಳರು ಹಾಡಹಗಲಲ್ಲೇ ೯೨,೮೦೦ರೂ ಹಣ ಲಪಟಾಯಿಸಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಅರಹಳ್ಳಿ ಮನೋಹರ್ ತನ್ನ ಸಹೋದ್ಯೋಗಿ ರಾಘವೇಂದ್ರ ಜೊತೆಯಲ್ಲಿ ನಗರದ ಎಂ.ಸಿ ರಸ್ತೆಯ ಗುರು ವೈನ್ಸ್‌ನಲ್ಲಿ ಬುಧವಾರ ನಡೆದಿರುವ ಮದ್ಯ ವಹಿವಾಟಿನ ಹಣವನ್ನು ಗುರುವಾರ ಬೆಳಿಗ್ಗೆ ೧೧.೨೦ರಲ್ಲಿಪೇಪರ್ ಒಂದರಲ್ಲಿ ಸುತ್ತಿಕೊಂಡು ದ್ವಿಚಕ್ರ ವಾಹನದ ಡಿಕ್ಕಿ ಒಳಗಡೆ ಇಟ್ಟು ಲಾಕ್ ಮಾಡಿ ರಾಘವೇಂದ್ರಗೆ ಮೈ ಹುಷಾರಿಲ್ಲದ ಕಾರಣ ಆಸ್ಪತ್ರೆಯಲ್ಲಿ ತೋರಿಸಲು ತೆರಳಿ ವಾಪಸ್ಸ್ ಬರುವಷ್ಟರಲ್ಲೇ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!