
ಉದಯವಾಹಿನಿ,ಕೆಂಭಾವಿ: ಯಾದಗಿರಿ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕುರಿ ಕಳ್ಳತನ ಮಾಡಿ ಬೇರೆಡೆ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಕುರಿ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹುಣಸಗಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ ಜಿಲ್ಲೆಯಲ್ಲಿ ಕುರಿ ಕಳ್ಳತನ ಮಾಡುತ್ತಿದ್ದ ಲಕ್ಷ್ಮಣ ದುರ್ಗಮುರ್ಗಿ (22), ಶೇಖಪ್ಪ ದುರ್ಗಮುರ್ಗಿ (28 ) ಹಾಗೂ ಸುರೇಶ ದುರ್ಗಮುರ್ಗಿ ಸೇರಿ ಮೂವರನ್ನು ಬಂಧಿಸಿದ್ದು ಇನ್ನುಳಿದ 6 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದರು.ಕಳೆದ ಜೂನ್ ನಿಂದ ಇಲ್ಲಿವರೆಗೂ ಕುರಿ ಕಳ್ಳತನವಾಗುತ್ತಿರುವ ಕುರಿತು ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ ಮತ್ತು ಸುರಪುರ ಉಪವಿಭಾಗದ ಡಿವೈಎಸ್ಪಿ ಹಾಗೂ ಹುಣಸಗಿ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಕೆಂಭಾವಿ ಪಿಎಸ್ ರಾಜಶೇಖರ ರಾಠೋಡ್, ವೆಂಕಣ್ಣ ಶಹಾಪುರಕರ್ ಅವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಜಾವ ಪತ್ತೆ ಕಾರ್ಯ ಆರಂಭಿಸಿದಾಗ, ತಿಪ್ಪನಟಗಿ ಕ್ರಾಸ್ ಹತ್ತಿರ ಸಂಶಯಾ ಸ್ಪದವಾಗಿ ಪೊಲೀಸ್ ವಾಹನ ನೋಡಿ ಓಡಲು ಯತ್ನಿಸಿಸುತ್ತಿದ್ದ ಮೂವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಪರಸನಹಳ್ಳಿಯಲ್ಲಿ 5, ತಳಳ್ಳಿ ಹಾಗೂ ಹುಣಸಗಿ ಹೊರವಲಯದಲ್ಲಿ ಸೇರಿ ಒಟ್ಟಾರೆಯಾಗಿ 35 ಕುರಿ ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ಅವರು ನೀಡಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿ ಮಾರಾಟದಿಂದ ಬಂದರು. 1 ಲಕ್ಷದ 1 ಸಾವಿರ ನಗದು ಮತ್ತು ಕಳ್ಳತನಕ್ಕೆ ಬಳಸುತ್ತಿದ್ದ ಬೊಲೆರೋ ಬಂಧಿತರಿಂದ ಜಪ್ತಿ ಮಾಡಿಕೊಂಡ ವಸ್ತುಗಳೊಂದಿಗೆ ಪ್ರಕರಣ ಭೇದಿಸಿದ ಪೊಲೀಸ ತಂಡ.
ಪಿಕಪ್, ಟಾಟಾ ಎಸಿ ವಾಹನ ಹಾಗೂ 3 ಬೈಕ್ ಸೇರಿ 8.31 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
