ಉದಯವಾಹಿನಿ,ಬೆಂಗಳೂರು : ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ನಿಗಧಿತ ಅವಧಿಯೊಳಗೆ ಯೋಜನೆ ಹಣ ಖಾತೆಗೆ ಜಮಾ ಆಗಲಿದೆ. ಸರ್ಕಾರದ ಫಲಾನುಭವಿ ಆಧಾರಿತ ಯೋಜನೆಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು, ಪ್ರತಿ ಮಾಸಿಕದ ಕೊನೆಯಲ್ಲಿ ಖಜಾನೆಗಳಲ್ಲಿ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸಲು ಮತ್ತು ಹಣ ಸಂದಾಯ ಮಾಡುವುದಕ್ಕೆ ವ್ಯವಸ್ಥೆ ಮಾಡುವ ಪೂರ್ವದಲ್ಲಿ, ಖಜಾನಗಳಲ್ಲಿ ಬಿಲ್ಲುಗಳನ್ನು ಪರಿಶೋಧನೆ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ಈ ಕೆಳಕಂಡ ಯೋಜನೆಗಳಿಗೆ ಸಂಬಂಧಪಟ್ಟ ಹಣ ಸೆಳೆಯುವ ಮತ್ತು ಬಟವಾಡ ಮಾಡುವ ಅಧಿಕಾರಿಗಳು ಈ ಕೆಳಕಂಡಂತ ನಮೂದಿಸಿರುವ ವೇಳಾಪಟ್ಟಿಯನ್ವಯ ನಿಗಧಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಖಜಾನಗಳಿಗೆ ಬಿಲ್ಲು ಸಲ್ಲಿಸಿ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸುವಂತ ತಿಳಿಸಲಾಗಿದೆ.
