ಉದಯವಾಹಿನಿ,ಮಸ್ಕಿ: ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ ವಿಜೇಂದ್ರ ಹುಟ್ಟು ಹಬ್ಬದ ನಿಮಿತ್ಯ ಇಲ್ಲಿನ ಬಣಜಿಗ ಸಮಾಜದ ಮುಖಂಡರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಪಟ್ಟಣದ ಅನ್ನಪೂರ್ಣ ನರ್ಸಿಂಗ್ ಹೋಮ, ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ನೀಡಿದರು, ಅಭಿನಂದನ ಸ್ಪೂರ್ತಿಧಾಮಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡಿದರು. ಬಣಜಿಗ ಸಮಾಜದ ತಾಲೂಕು ಯುವ ಘಟಕದ ಅಧ್ಯಕ್ಷ ಸುಗಣ್ಣ ಬಾಳೆಕಾಯಿ ಅವರು ಮಾತನಾಡಿ, ರಾಜ್ಯದ ಭವಿಷ್ಯದ ನಾಯಕ, ಬಿಜೆಪಿ ಪಕ್ಷದ ಧುರೀಣ, ಶಾಸಕ ವಿಜೇಂದ್ರ ಅವರು ನೂರು ವರ್ಷಗಳ ಕಾಲ ಬಾಳಿ, ಬದುಕಲಿ, ನಾಡು ಕಟ್ಟಲು ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ, ಅವರ ತಂದೆ ಮಾಜಿ ಸಿಎಂ,ಬಿ.ಎಸ್ ಯಡಿಯೂರಪ್ಪ ಅವರಂತೆ ಉತ್ತಮ ಹೆಸರು ಮಾಡಲೆಂದು ಆ ಭಗವಂತನಲ್ಲಿ ಬಣಜಿಗ ಸಮಾಜ ಪ್ರಾರ್ಥಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡ ಬಸವರಾಜ ಕುಡಿತಿನಿ, ಶಿವು ಬ್ಯಾಳಿ, ಮಲ್ಲಿಕಾರ್ಜುನ, ಶಿವಕುಮಾರ ಗೋನಾಳ, ಶಿವಪ್ರಸಾದ್ ಕ್ಯಾತ್ನಟ್ಟಿ, ಬಸವರಾಜ ಕಡಬೂರು, ಸುರೇಶ ಬಾಳೆಕಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
