
ಉದಯವಾಹಿನಿ,ಚಿಂಚೋಳಿ: ಮತಕ್ಷೇತ್ರದ ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳ ವಾರ್ಡನಗಳು ತಮ್ಮ ಕರ್ತವ್ಯ ಜವಾಬ್ದಾರಿ ಮರೆತು ಕೇಂದ್ರ ಸ್ಥಾನದಲ್ಲಿ ಇರದೆ ಮಕ್ಕಳನ್ನು ನಿರ್ವಹಣೆ ಮಾಡುತ್ತಿಲ್ಲಾ ಎಂದು ಕಲ್ಯಾಣ ಕರ್ನಾಟಕ ಸಮಾಜ ಜಾಗೃಣ ಮಂಚ್ ಸಂಚಾಲಕ ರಮೇಶ ಯಾಕಾಪೂರ ಆರೋಪಿಸಿದ್ದಾರೆ.ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ವಸತಿ ನಿಲಯಗಳ ವಾರ್ಡನಗಳು ಕೇಂದ್ರ ಸ್ಥಾನದಲ್ಲಿ ಇರದೆ ಕಲಬುರ್ಗಿ ಬೀದರ ಕೇಂದ್ರಗಳಿಂದ ಕಾಟಾಚಾರಕ್ಕಾಗಿ ವಸತಿ ನಿಲಯಕ್ಕೆ ಬಂದು ಹೋಗುವ ಅಭ್ಯಾಸ ಮಾಡಿಕೊಂಡಿದ್ದಾರೆ.ಶಾಲಾಮಕ್ಕಳು ಬೆಳಿಗ್ಗೆ ಶಾಲೆಗೆ ತೆರಳಿದ ನಂತರ ವಸತಿ ನಿಲಯಕ್ಕೆ ಆಗಮಿಸಿ ಅಡುಗೆದಾರರಿಗೆ ಎಡ್ಮೂರು ದಿನಗಳು ಆದಷ್ಟು ಆಹಾರಧಾನ್ಯಗಳನ್ನು ವಿತರಿಸಿ ಮಕ್ಕಳು ಶಾಲೆಯಿಂದ ಬರುವಷ್ಟರಲ್ಲಿ ವಾರ್ಡಗಳು ಮನೆ ಸೇರುತ್ತಿದ್ದಾರೆ. ಪರಿಶೀಷ್ಟ ಜಾತಿ ಪರಿಶೀಷ್ಟ ಪಂಗಡ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಬಡ ಮಕ್ಕಳ ಶ್ರೇಯೋಭಿವೃದ್ದಿಯೇ ಇಲಾಖೆಯ ಪ್ರಮುಖ ಉದ್ದೇಶವಾಗಿದೆ,ವಾರ್ಡನ ಹುದ್ದೆಯು ಮಕ್ಕಳ ಶಿಕ್ಷಣ, ಉಟೋಪಚಾರ, ಆರೋಗ್ಯ, ವಸತಿ ನಿಲಯ ಸ್ವಚ್ಚತೆ,ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರಾತ್ರಿ ಸಮಯದಲ್ಲಿ ಮಕ್ಕಳಿಗೆ ಆರೋಗ್ಯ ತೊಂದರೆಯಾದಲ್ಲಿ ತಕ್ಷಣವೇ ಸ್ವಂದಿಸುವುದು ಅವರ ಆದ್ಯಕರ್ತವ್ಯವಾಗಿದೆ.
ಎಲ್ಲಾ ವಾರ್ಡನಗಳು ಕರ್ತವ್ಯ ಮೆರೆತಿದ್ದು ತಾಲ್ಲೂಕಿನಲ್ಲಿ ಕಂಡು ಬರುತ್ತಿದೆ,ವಾರ್ಡನಗಳು ಬೆಳೆಗ್ಗೆ ಸಾಯಂಕಾಲ ಊಟದ ಸಮಯದಲ್ಲಿ ಯಾವ ವಾರ್ಡನ ವಸತಿ ನಿಲಯದಲ್ಲಿ ಇಲ್ಲದೆ ಕೇವಲ ಅಡುಗೆ ಸಿಬ್ಬಂದಿಯವರು ವಸತಿ ನಿಲಯಗಳಲ್ಲಿ ಹಾಜರಿದ್ದು ಊಟ ಬಡಿಸುತ್ತಾರೆ. ಕ್ಷೇತ್ರದ ವಸತಿ ನಿಲಯಗಳ ಈ ದುರಾಡಳಿತ ವ್ಯವಸ್ಥೆ ಸಂಬಂಧ ಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಇಲ್ಲಾದಿದ್ದರೆ ಬರುವ ದಿನಗಳಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
