ಉದಯವಾಹಿನಿ, ಹಾಸನ : ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ನ.3 ಹಾಗೂ ನ.4ರ ವಿಶೇಷ ದರ್ಶನಕ್ಕೆ 1000ರೂ. ಮುಖ ಬೆಲೆಯ 860 ಪಾಸ್ ಮಾರಾಟವಾಗಿದ್ದು 8,60,000 ರೂ. ಸಂಗ್ರಹಿಸಲಾಗಿದೆ.300 ಮುಖ ಬೆಲೆಯ 5178 ಪಾಸ್ ಮಾರಾಟ ಮಾಡಲಾಗಿ 15,53,400ರೂ. ಸಂಗ್ರಹಿಸಲಾಗಿದ್ದು, ಒಟ್ಟು 23,13,400ರೂ. ಸಂಗ್ರಹವಾಗಿದೆ ಎಂದು ಎಡಿಎಲ್ ಆರ್.ಸುಜಯ್ ಮಾಹಿತಿ ನೀಡಿದ್ದಾರೆ. ಲಾಡು ಮಾರಾಟದಿಂದ 5,12,340 ಸಂಗ್ರಹಿಸಲಾಗಿದೆ. ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮ: ನಗರದ ಕಲಾ ಕಾಲೇಜಿನಲ್ಲಿ ಸಂಜೆ 7 ಗಂಟೆಗೆ ಹಮ್ಮಿಕೊಂಡಿರುವ ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ವಿಶೇಷವಾದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಖ್ಯಾತಿ ಪಡೆದಿರುವ ಆಳ್ವಾಸ್ ನುಡಿಸಿರಿ ತಂಡವು ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಯೋಜನೆ ಮಾಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದಲೂ ಅಗತ್ಯ ಬಂದೋಬಸ್ತ ವ್ಯವಸ್ಥೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
