ಉದಯವಾಹಿನಿ, ಶಿಡ್ಲಘಟ್ಟ:ವಿವಿಧ ಕ್ಷೇತ್ರಗಳ ಗಣ್ಯರನ್ನು ಆಯ್ಕೆ ಮಾಡಿ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. 2023ನೇ ಸಾಲಿನಲ್ಲಿ ಒಟ್ಟು15 ಸಾಧಕರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದರು.ಬೆಂಗಳೂರಿನ ಕೆಂಗೇರಿಯ ದರ್ಶನ್ ಕಾಲೇಜು ಆವರಣದಲ್ಲಿ ಕಲಾ ಸಿರಿ ಬಳಗದ ವತಿಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಬಾಲಚಂದ್ರ ಕೆಸಿ ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಕಾಚನಾಯಕನಹಳ್ಳಿ ಗ್ರಾಮದ ರೈತ ನಿವಾಸಿಗಳಾದ ಚಿಕ್ಕಪ್ಪಯ್ಯ ಮತ್ತು ವೆಂಕಟಮ್ಮ ನವರ ಮಗನಾದ ಬಾಲಚಂದ್ರ ಕೆಸಿ ಅವರು ಸುಮಾರು ಏಳು ವರ್ಷಗಳಿಂದ ಇಂಡೋ ಏಷಿಯನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿತ್ತಿದ್ದು, ಇವರ ಸಾಹಿತ್ಯದ ಕ್ಷೇತ್ರದ ಕೊಡುಗೆಯನ್ನು ಗುರ್ತಿಸಿ ಕಲಾ ಸಿರಿ ಬಳಗದ ವತಿಯಿಂದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ  ರೂಪೇಶರಾಜಣ್ಣ,ಗೋ ಸಂರಕ್ಷಕರು ಹಾಗೂ ಸಮಾಜ ಸೇವಕ ಮಹೇಂದ್ರ ಮುನೋತ್,ಬೆಂಗಳೂರು ಉತ್ತರ ಜಿಲ್ಲೆಯ ನಿವೃತ ಉಪ ನಿರ್ದೇಶಕ ಜಯರಂಗ ಉಪಸ್ಥಿತರಿದ್ದರು
ಕನ್ನಡ ರಾಜ್ಯೋತ್ಸವದ ಕಲಾಸಿರಿ ಪ್ರಶಸ್ತಿ ಪಡೆದುಕೊಂಡಿರುವುದು ನನಗೆ ಸಂತಸ ತಂದಿದೆ. ಈ ಪ್ರಶಸ್ತಿಯನ್ನು ನನ್ನ ತಂದೆ ತಾಯಿಯ ಶ್ರಮದಿಂದ ನನಗೆ ಲಭಿಸಿದೆ. ನನ್ನ ಈ ಪ್ರಶಸ್ತಿಗೆ ಶ್ರಮಿಸಿದ ನಮ್ಮ ಇಂಡೋ ಏಷಿಯನ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಲ್ಲಾ ನನ್ನ ಸಹೋದ್ಯೋಗಿಗಳು, ಹಾಗೂ ಸ್ನೇಹಿತರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ.
ಬಾಲಚಂದ್ರ ಕೆಸಿ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ

Leave a Reply

Your email address will not be published. Required fields are marked *

error: Content is protected !!