ಉದಯವಾಹಿನಿ, ಹೊಸಕೋಟೆ: ಪೋಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಕಿಶೋರ್ ಎಂಬ ೩೦ ರ‍್ಷದ ಯುವಕ ೧೧ ದಿನದ ಬಾಣಂತಿಯಾದ ತನ್ನ ಪತ್ನಿಯನ್ನೆ ತಲೆದಿಂಬಿನಿಂದ ಉಸಿರು ಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ.ಪೋಲೀಸ್ ಪೇದೆ ಕಿಶೋರ್ ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ವಿರಾಪುರ ಗ್ರಾಮದವನಾಗಿದ್ದು ಕಳೆದ ೧೧ ತಿಂಗಳಿಂದೆ ಇದೇ ಕೊಳತೂರು ಗ್ರಾಮದ ಸುಬ್ರಮಣಿ ರವರ ಮಗಳಾದ ೨೩ ರ‍್ಷದ ಪ್ರತಿಭಾ ರವರನ್ನು ಮದುವೆ ಮಾಡಿಕೊಂಡಿದ್ದ ಆದರೆ ಇತ್ತೀಚೆಗೆ ಕಿಶೋರ್ ರವರ ತಾಯಿ ವರದಕ್ಷಿಣೆ ಸರಿಯಾಗಿ ಕೊಟ್ಟಿಲ್ಲ ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಎಂದು ತಕರಾರು ಮಾಡುತ್ತಿದ್ದು ಮಗನ ಕಿವಿ ಹಿಂಡುತ್ತಿದ್ದಳು ಆಗ ಕೊಶೋರ್, ತನ್ನ ಹೆಂಡತಿ ಪ್ರತಿಭಾರವರಿಗೆ ಪ್ರತಿ ದಿನ ಮಾನಸಿಕ ಹಿಂಸೆ ನೀಡುತ್ತಿದ್ದ ಇತ್ತಿಚೆಗೆ ಪ್ರತಿಭಾ ರವರಿಗೆ ಶ್ರೀಮಂತ ಕರ‍್ಯ ನಡೆಯಬೇಕಾದರೆ ಕಿಶೋರ್ ಮನೆಯವರನ್ನು ಸರಿಯಾಗಿ ವಿಚಾರಿಸಿಲ್ಲ ಎಂದು ಗಲಾಟೆ ಮಾಡುತ್ತಿದ್ದು ರಾತ್ರಿ ಮನೆಗೆ ಬಂದು ಈ ರೀತಿ ಮಾಡಿದ್ದಾನೆ ಎಂದು ಮೃತ ಪ್ರತಿಬಾ ರವರ ತಂದೆ ಸುಬ್ರಮಣಿ ಆರೋಪಿಸಿದ್ದಾರೆ.
