ಉದಯವಾಹಿನಿ, ಚನ್ನಪಟ್ಟಣ: ಆಸ್ಪತ್ರೆಗೆ ರೋಗಿಗಳಿಗೆ ಯಾವುದೇ ಚಿಕಿತ್ಸೆ ಇಲ್ಲ ಬರುವ ಬೆಂಗಳೂರಿಗೆ ಕಳುಹಿಸದೆ ಇಲ್ಲಿಯೇ ಉತ್ತಮ ಆರೋಗ್ಯ ಸೇವೆಯನ್ನು ನೀಡಬೇಕು. ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಕಣ್ಣಲ್ಲಿ ನೀರು ತರಬೇಡಿ ಹಾಗೂ ಅವರ ಕಣ್ಣಲ್ಲಿ ಆನಂದ ಕಣ್ಣೀರಾಗಬೇಕು. ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿಗಳಾದ ನಿರ್ಮಲಾ ನಂದನಾಥ ಸ್ವಾಮೀಜಿ ವೈದ್ಯರು ಮತ್ತು ಯುವರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಬೆಂಗಳೂರು ಮೈಸೂರು ಹೆದ್ದಾರಿಯ ಮುದುಗೆರೆ ಸಮೀಪ ನೂತನವಾಗಿ ಆರಂಭವಾದ ಚಾಮುಂಡೇಶ್ವರಿ ಆಸ್ಪತ್ರೆ, ಸಂಶೋಧನಾ ಕೇಂದ್ರ ಹಾಗೂ ಮೆಡಿಕಲ್ ಕಾಲೇಜು ಹಾಗೂ ಹೊರ ರೋಗಿಗಳ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮ ಅಪ್ಪ-ಅಮ್ಮ ದೇಹ ನೀಡುತ್ತಾರೆ. ದೇಹದಲ್ಲಿ ಬರುವ ರೋಗಗಳಿಗೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಸು ಮಾಡುತ್ತಾರೆ. ಅದೇ ವೈದ್ಯಕೀಯ ವಿದ್ಯಾರ್ಥಿಗಳು ನೇರವಾಗಿ ತಮ್ಮ ಪ್ರತಿಭೆಯಿಂದಲೇ ವೈದ್ಯಕೀಯ ಸೀಟು ಗಿಟ್ಟಿಸಿಕೊಂಡಿರುವವರ ಸಂಖ್ಯೆ ತೀರಾ ವಿರಳ, ಮಿಕ್ಕವರು ಸೀಟು, ಪಡೆದುಕೊಳ್ಳಲು ಪೋಷಕರೇ ಕಾರಣ, ನಿಮಗಾಗಿ ಅವರು ಪಟ್ಟಿರುವ ಕಷ್ಟವನ್ನು ನೆನಪಿಸಿ ಕೊಳಬೇಕು, ವೈದ್ಯಕೀಯ ವಿದ್ಯಾರ್ಥಿಯಾಗಲು ಪಾಥಮಿಕ ಹಂತದಿಂದಲೂ, ವಿದ್ಯಾಭ್ಯಾಸ ನೀಡಿದ ಗುರುಗಳ ಶ್ರಮವೂ ಇದೆ. ಸಿಇಟಿ, ನೀಟ್ ನಲ್ಲಿ ನೀವು ಪಟ್ಟ ಶ್ರಮವನ್ನು ಪ್ರತಿ ಹಂತದಲ್ಲೂ ನೆನಪಿಸಿಕೊಂಡು ತಮ್ಮ ವೈದ್ಯಕೀಯ ಪಾಠವನ್ನು ಕಲಿಯಬೇಕು, ಯಾವುದೇ ರೀತಿಯ ರೋಗಿ ಬಂದರೂ ಉತ್ತಮ ಸೇವೆ ಒದಗಿಸುವಂತಹ ವೈದ್ಯರಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
