ಉದಯವಾಹಿನಿ, ಬೀದರ್: ನೌಬಾದ್ ಬಳಿಯ ಕರೇಜ್ ಅನ್ನು ಬರುವ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಕೆಲ ಉದ್ಯಮಿಗಳು ನಮ್ಮ ಸ್ಮಾರಕ ದತ್ತು ಯೋಜನೆ ಅಡಿ ಕರೇಜ್ ದತ್ತು ಪಡೆಯಲು ಮುಂದೆ ಬಂದಿದ್ದಾರೆ’ ಎಂದು ತಿಳಿಸಿದರು.
‘ಕರೇಜ್ ಹಿಂದಿನ ಕಾಲದಲ್ಲಿ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಎಂತಹ ಬರಗಾಲ ಬಂದರೂ ಇದರೊಳಗಿನ ನೀರು ಬತ್ತುವುದಿಲ್ಲ. ಈಗ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇಂತಹ ಕರೇಜ್ ನಿರ್ಮಿಸಲು ಆಗುವುದಿಲ್ಲ. ಇದನ್ನು ಅಭಿವೃದ್ಧಿಪಡಿಸಿದ್ದಲ್ಲಿ ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಲಿದೆ’ ಎಂದು ಹೇಳಿದರು.
