
ಉದಯವಾಹಿನಿ, ಔರಾದ್ : ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿದ್ದರೂ ಕೂಡ ಕೆಲವರು ಹಾಲಿ ಶಾಸಕರಾಗಿದ್ದ ಪ್ರಭು.ಬಿ ಚವ್ಹಾಣ ಅವರ ವಿರುದ್ಧ ಇಲ್ಲ- ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಟಿಕೆಟ್ ನೀಡದಂತೆ ಬೆಂಗಳೂರಿಗೆ ನಿಯೋಗ ತೆಗೆದುಕೊಂಡು ಹೋಗಿದ್ದರು. ನಂತರ ಪಕ್ಷವು ಶ್ರೀ ಪ್ರಭು ಚವ್ಹಾಣ ಅವರನ್ನೇ ಅಭ್ಯರ್ಥಿಯೆಂದು ಘೋಷಿಸಿದಾಗ ನಮ್ಮ ಪಕ್ಷದ ಕೆಲವರ ಮಾರ್ಗದರ್ಶನದ ಮೇರೆಗೆ ತಾತ್ಕಾಲಿಕ ರಾಜಿನಾಮೆಯ ನಡೆಸಿ, ಶಾಸಕರ ಹೆಸರು ಕೆಡಿಸಲು ಯತ್ನಿಸಿದ್ದವರಿಗೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅದ್ಯಕ್ಷ ರಾಮಶೇಟ್ಟಿ ಪನ್ನಾಳೆ ಹೇಳಿದರು. ಇದಲ್ಲದೆ ಕ್ಷೇತ್ರದ ಹಳ್ಳಿ-ಹಳ್ಳಿಗೆ ತೆರಳಿ ಪಕ್ಷವಿರೋಧಿ ಕೆಲಸ ಮಾಡಿರುವುದು ಜಗಜ್ಜಾಹೀರಾಗಿದೆ. ತಾತ್ಕಾಲಿಕ ರಾಜಿನಾಮೆ ನೀಡಿದವರ ಪೈಕಿ ಕೆಲವರು ನಮ್ಮ ಪಕ್ಷದ ಮುಖಂಡರ ಜೊತೆಯಲ್ಲಿಯೇ ಸುತ್ತಾಡುತಿದ್ದಾರೆ. ಇನ್ನೂ ಕೆಲವರು ಬೇರೆ-ಬೇರೆ ಪಕ್ಷಗಳ ಜೊತೆಗೆ ಗುರುತಿಸಿಕೊಂಡಿದ್ದಾರೆ. ಮತ್ತು ಇನ್ನೂ ಕೆಲವರು ತಟಸ್ಥರಾಗಿದ್ದರೂ ಕೂಡ ಮರಳಿ ಬಿಜೆಪಿ ಪಕ್ಷಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತರು ಸಾಕಷ್ಟು ಗೊಂದಲದಲ್ಲಿದ್ದಾರೆ.ಭಾರತೀಯ ಜನತಾ ಪಕ್ಷವು ಕ್ಷೇತ್ರದಲ್ಲಿ ಅತ್ಯಂತ ಪ್ರಾಬಲ್ಯ ಹೊಂದಿದ್ದು ಇದನ್ನು ಹೀಗೆ ಕಾಪಾಡಿಕೊಂಡು ಹೋಗಬೇಕಿದೆ. ಪಕ್ಷವನ್ನು ಇನ್ನಷ್ಟು ಬಲಪಡಿಸಲು ಮತ್ತು ಪಕ್ಷದ ಹಿತದೃಷ್ಟಿಯಿಂದ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷವಿರೋಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಯಾವುದೇ ಕಾರಣಕ್ಕೂ ಪುನಃ ಬಿಜೆಪಿಗೆ ಮರುಸೇರ್ಪಡೆ ಮಾಡಿಕೊಳ್ಳಲೇಬಾರದೆಂದು ಮತ್ತು ಮುಂದಿನ 6 ಕಾಲ ಇವರನ್ನು ಪಕ್ಷದ ಯಾವುದೇ ಕಾರ್ಯಚಟುವಟಿಕೆಗಳನ್ನು ನೀಡಬಾರದೆಂದು ಮಂಡಲ ಕೋರ್ ಕಮಿಟಿಯಲ್ಲಿ ಒಕ್ಕೋರಲಿನಿಂದ ತೀರ್ಮಾನಿಸಲಾಗಿದೆ. ಮತ್ತು ಈ ಬಗ್ಗೆ ಭಾರತೀಯ ಜನತಾ ಪಕ್ಷದ ಪರಿಷ್ಟರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಿ ಶಾಸಕ ಪ್ರಭು ಚವ್ಹಾಣ, ಕಿರಣ್ ಪಾಟೀಲ್ ಹಕ್ಯಾಳ, ಸುರೇಶ ಬೋಸಲೆ, ಸತೀಶ್ ಪಾಟೀಲ್, ರಮೇಶ ಬಿರಾದಾರ್, ಖಂಡೊಬ ಕಂಗಟೆ, ರಮೇಶ ಉಪಾಶೆ, ಶರಣಪ್ಪ ಪಂಚಾಕ್ಷರಿ, ಶಿವಕುಮಾರ ಪಾಂಚಾಳ, ನಯುಮ ಬೆಳಕೋಣಿ, ಬಸವರಾಜ್ ಪಾಟೀಲ್, ಗೀರಿಶ ವಡೆಯರ, ಶಿವೆರಾಜ್ ಆಲಮಜೆ, ಗಣೇಶ ಕರೆಗಾವೆ, ಅಶೋಕ್ ಅಲ್ಮಾಜೆ, ಮಾರುತರೆಡ್ಡಿ, ಜೈಪಾಲರೆಡ್ಡಿ ಬರದಾಪುರ, ಶಿವರಾಜ ಜುಲ್ಫೆ ಸೇರಿದಂತೆ ಇತರರು ಇದ್ದರು.
ಪಕ್ಷ ನಮ್ಮ ತಾಯಿ ಸಮಾನ ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಕಾರ್ಯಕರ್ತರು ನಮ್ಮ ಪಕ್ಷದ ಸೈನಿಕರು ಅವರಿಂದಲೇ ಪಕ್ಷ ಇದೆ.
-ಪ್ರಭು ಚವ್ಹಾಣ, ಶಾಸಕರು ಔರಾದ್
ಪಕ್ಷದಿಂದ ಉಚ್ಛಾಟನೆಗೂಂಡವರು:
ಪ್ರಕಾಶ ಗುರಪ್ಪಾ ಟೊಣ್ಣೆ ಕಮಲನಗರ, ಬಂಡೆಪ್ಪಾ ಕಂಟೆ ಔರಾದ, ಶ್ರೀಮತಿ ಸುಚಿತ್ರಾ ಹಂಗರಗೆ ಎಕಂಬಾ, ಚಂದ್ರಶೇಖರ ದೇಶಮುಖ ಭವಾನಿ ಬಿಜಲಗಾಂವ, ಕಾಶಿನಾಥ ಜಾಧವ ತೇಗಂಪೂರ, ಸುನೀಲಕುಮಾರ ದೇಶಮುಖ ಔರಾದ, ಮಾಣಿಕ ಚವ್ಹಾಣ ಆಲೂರ(ಕೆ) ತಾಂಡಾ, ವಸಂತ ಮಧುಕರರಾವ ಜೋಶಿ ಠಾಣಾಕುಶನೂರ, ಕಿರಣ ಪಾಟೀಲ ಚಿಕ್ಲಿ(ಜೆ), ಅರವಿಂದ ಪಾಟೀಲ ಎಕಂಬಾ, ಚಂದ್ರಪಾಲ ಪಾಟೀಲ, ವಕೀಲರು ಔರಾದ, ದೀಪಕ ದಿಗಂಬರರಾವ ಪಾಟೀಲ ಚಾಂದೋರಿ, ರಾಮರಾವ ರಾಠೋಡ, ಲಶ್ವರನಾಯ್ಕ ತಾಂಡಾ ಹುಲ್ಯಾಳ, ಬಂಡೆಪ್ಪಾ ಅಂಬರಗೊಂಡ ಕೋಟೆ ಔರಾದ, ಸೋಮನಾಥ ಖಡಕೆ ಮುಧೋಳ(ಬಿ), ಓಂಪ್ರಕಾಶ ಬಿರಾದಾರ ಸಂಗಮ, ಸಂತೋಷ ಬಿರಾದಾರ ಸಂಗಮ, ಗೋವಿಂದ ಪಾಟೀಲ ಭಂಡಾರಕಮುಟಾ, ನಾರಾಯಣ ಪಾಟೀಲ ಭಂಡಾರಕಮುಟಾ, ಸಂಜುಕುಮಾರ ಪಾಟೀಲ ಹಿಪ್ಪಳಗಾಂವ, ಚಂದ್ರಕಾಂತ ಹೊನ್ನಾ ಗಡಿ ಕುಶನೂರ, ಜ್ಞಾನೇಶ್ವರ ಪಾಟೀಲ ಹೊಳಸಮುದ್ರ, ಸಂಗಮೇಶ ಪಾಟೀಲ ಔರಾದ, ರಾಮ ಕದಂ ಹೊಳಸಮುದ್ರ, ಶ್ರೀರಂಗ ಪರಿಹಾರ ಕೊಟಗ್ಯಾಳ, ಚನ್ನಬಸವ ಬಿರಾದಾರ ಕೌಠಾ(ಕೆ),
