ಉದಯವಾಹಿನಿ ದೇವದುರ್ಗ: ವಿವಿಧ ಬೇಡಿಕೆಗಳು ಈಡೇರಿಸುವಂತೆ ಸಿಪಿಐಎಂಎಲ್ ರೆಡ್‌ಸ್ಟಾರ್ ಹಾಗೂ ಕರ್ನಾಟಕ ರೈತ ಸಂಘ ಎಐಕೆಕೆಎಸ್ ಸಂಘಟನೆಯ ಪದಾಧಿಕಾರಿಗಳು ಸೋಮವಾರ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ತಹಶೀಲ್ದಾರ ಮುಖಾಂತರ ಸಲ್ಲಿಸಿದರು. ಜವಳಗೇರಾ ಭೂರಹಿತ ಕೃಷಿ ಕಾರ್ಮಿಕರು ಮಾಡುತ್ತಿರುವ ಹೆಚ್ಚುವರಿ ಭೂಮಿಯ ಸಾಗುವಳಿಗೆ ರಕ್ಷಣೆ ನೀಡಿ. ಸೆಕ್ಷನ್ ೭೪ರ ಪ್ರಕಾರ ಪಂಡಿ0ಗಿನಲ್ಲಿರುವ ಪ್ರಕರಣಗಳಿಗೆ ಸಂಬ0ಧಿಸಿದ ಭೂಮಿಯ ವರ್ಗಾವಣೆ ವಹಿವಾಟು ಮಾಡದಂತೆ, ಜಿಲ್ಲೆಯ ಎಲ್ಲಾ ಭೂ ಮಾಲೀಕರಿಗೆ ನೋಟಿಸ್ ನೀಡಿ, ವಿಚಾರಣೆ ಹಂತದಲ್ಲಿರುವ ಜವಳಗೇರಾ ಸಿದ್ದಲಿಂಗಮ್ಮ ವೆಂಕಟರಾವ್ ನಾಡಗೌಡ ಇವರ ಪ್ರಕರಣದಲ್ಲಿ ತೋರಿಸಲಾದ ೧೦೬೪ ಎಕರೆ ಭೂಮಿಯ ವರ್ಗಾವಣೆ ಮಾರಾಟ ಹಾಗೂ ವಹಿವಾಟು ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಜವಳಗೇರಾ ನಾಡಗೌಡರ ೧೭ ಜನ ಘೋಷಣಾ ಪತ್ರ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಭೂಮಾಲೀಕರ ಹೆಚ್ಚುವರಿ ಪ್ರಕರಣಗಳನ್ನು ಸೆಕ್ಷನ್ ೧೨೨ಎ]ರ ಅಡಿ ಮರು ವಿಚಾರಣೆ ಆರಂಭಿಸಬೇಕು. ಜಿಲ್ಲಾದ್ಯಂತ ಹೆಚ್ಚುವರಿ ಭೂಮಿ ಫಲಾನುಭವಿಗಳಿಗೆ ಕಬ್ಜ ನೀಡಬೇಕು. ಧಾರ್ಮಿಕ ಸಂಘ ಹಾಗೂ ಸಂಸ್ಥೆಗಳು ಹೊಂದಿದ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತ ಬಡವರಿಗೆ ಹಂಚಿಕೆ ಮಾಡಬೇಕು. ತಾಲೂಕಿನ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ಕೊಡಿ. ಅರಣ್ಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುತ್ತಿದ್ದು, ತಡೆಹಿಡಿಯಲು ಕ್ರಮವಹಿಸಬೇಕು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲೆಮಾರಿ ಸಮುದಾಯಗಳ ಭೂರಹಿತರ ಸಮೀಕ್ಷೆಗೆ ಮುಂದಾಗಬೇಕು. ಈಗಾಗಲೇ ರೈತರಿಗೆ ಆಗುತ್ತಿರುವ ಹಲವು ಸಮಸ್ಯೆಗಳ ಕುರಿತು ಹೋರಾಟ ಮೂಲಕ ಅಧಿಕಾರಿಗಳು ಗಮನಕ್ಕೆ ತರಲಾಗಿದೆ. ಇಲ್ಲಿವರೆಗೆ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು. ಸ್ಥಳೀಯ ಜನಪತ್ರಿನಿಧಿಗಳು ರೈತರ ಹಲವು ಬೇಡಿಕೆಗಳು ಕುರಿತು ಗಮನಹರಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಯ್ಯ ಕಟ್ಟಮನಿ, ತಾಲೂಕಾಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ಕರ‍್ಯದರ್ಶಿ ದುರುಗಣ ಇರಬಗೇರಾ, ಕೆ.ಶಿವರಾಮ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!