ಉದಯವಾಹಿನಿ,ಕೋಲಾರ: ಮಾನವನಿಗೆ ಮಾರಕ ಎನ್ನಲಾಗುವ ಝೀಕಾ ವೈರಸ್ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲ ಬೆಟ್ಟ ವ್ಯಾಪ್ತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆ, ಕೋಲಾರ ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ.
ಆರೋಗ್ಯ ಇಲಾಖೆಯು ಪ್ರತಿ ವರ್ಷವು ನಿಯಮಿತವಾಗಿ ಸೊಳ್ಳೆಗಳಿಂದ ಹರಡುವ ವೈರಸ್ ಕುರಿತು ಸರ್ವೇಕ್ಷಣೆ ನಡೆಸುತ್ತಿರುತ್ತದೆ. ಹೀಗೆ, ಸರ್ವೇಕ್ಷಣಾ ನಡೆಸುವ ಸಂದರ್ಭದಲ್ಲಿ ಶಿಡ್ಲಪಟ್ಟ ತಾಲ್ಲೂಕಿನ ಕೆಲವು ಗ್ರಾಮಗಳ ಸೊಳ್ಳೆಗಳಲ್ಲಿ ಝೀಕಾ ಪತ್ತೆಯಾಗಿದ್ದು, ಸದ್ಯಕ್ಕೆ ಝೀಕಾ ವೈರಸ್ ಸಹ ಮಲೇರಿಯಾ, ಡೇಂಗ್ಯೂ ಅಥವಾ ಚಿಕನ್ ಗುನ್ಯಾ ಹರಡುವ ಸೊಳ್ಳೆಗಳಿಂದಲೇ ಹರಡುತ್ತದೆ. ಸೊಳ್ಳೆಗಳ ನಿಯಂತ್ರಣ ಯಾವುದೇ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸುವ ಅತ್ಯುತ್ತಮ. ಮುಂಜಾಗ್ರತಾ ಕ್ರಮವಾಗಿದೆ. ಮನುಷ್ಯರು ವಾಸಿಸುವ ಮನೆಯ ಸುತ್ತಮುತ್ತಲು ಮಳೆ ನೀರು ಸಂಗ್ರಹವಾಗದಂತೆ, ಟೈರು ಮತ್ತು ತೆಂಗಿನ ಚಿಪ್ಪು, ಹಳ್ಳಕೊಳ್ಳಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಸ್ವಚ್ಚ ನೀರಲ್ಲಿ ಈಡಿಸ್ ಸೊಳ್ಳೆ ಮೊಟ್ಟೆ ಇಟ್ಟು ಮರಿಗಳನ್ನು ಮಾಡುವ ಮೂಲಕ ಸೊಳ್ಳೆಗಳ ಉತ್ಪತ್ತಿ ಮಾಡುತ್ತದೆ.
