ಉದಯವಾಹಿನಿ, ಭೋಪಾಲ್: ಪೊಲೀಸ್ ವಶದಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಕುಡಿದು ಖಾಲಿ ಮಾಡಿದ ಆರೋಪದ ಮೇಲೆ ಇಲಿಯೊಂದನ್ನು ಹಿಡಿದು ಬೋನಿನೊಳಗೆ ಹಾಕಿರುವ ವಿಚಿತ್ರ ಘಟನೆ ಮಧ್ಯ ಪ್ರದೇಶದ ಛಿಂದ್ವಾರಾದಲ್ಲಿ ನಡೆದಿದೆ.
ಮನೆ ಅಥವಾ ಕಚೇರಿಗಳಲ್ಲಿ ಹಳೆಯ ಕೋಣೆಗಳಿದ್ದರೆ ಅಲ್ಲಿ ಇಲಿ, ಜೀರಳೆಗಳ ಸಾಮ್ರಾಜ್ಯವೊಂದು ಹಾಯಾಗಿ ರಾತ್ರಿ ಹೊತ್ತು ತಿರುಗಾಡುತ್ತವೆ.
ಇವುಗಳ ದೆಸೆಯಿಂದ ಕೆಲವೊಮ್ಮೆ ಪೇಪರ್ ಹಾಗೂ ಕೆಲ ಅಗತ್ಯ ದಾಖಲೆಗಳು ನಾಶವಾಗುವುದುಂಟು. ಇಂಥದ್ಧೇ ಒಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.ಅಕ್ರಮ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡು ಠಾಣೆಯಲ್ಲಿ ಇಟ್ಟಿದ್ದರು. 60 ಮದ್ಯದ ಪ್ಲ್ಟಾಸ್ಟಿಕ್ ಬಾಟಲಿಗಳನ್ನು ಚೀಲವೊಂದರಲ್ಲಿ ಕಟ್ಟಿ ಇಟ್ಟಿದ್ದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ನ್ಯಾಯಾಲಯಕ್ಕೆ ಸಾಕ್ಷಿಯಾಗಿ ಇದನ್ನು ಪೊಲೀಸರು ತೋರಿಸಬೇಕಿತ್ತು.
