ಉದಯವಾಹಿನಿ, ಬೆಂಗಳೂರು: ವಿಶ್ವದ ನರ್ಸಿಂಗ್ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ಮೀಸಲಾಗಿರುವ ಪ್ರತಿಷ್ಠಿತ ಶ್ರೀ ನಗರೀಂದ್ರ ನಾಮಾಂಕಿತ ಗ್ಲೋಬಲ್ ಪುರಸ್ಕಾರಕ್ಕೆ ಡಾ. ದಿಲೀಪ್ ಕುಮಾರ್ ತಿಮ್ಮಪ್ಪ ಭಾಜನರಾಗಿದ್ದು, ಥಾಯ್ಲೆಂಡಿನ ಅರಮನೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಣಿ ಮಹಾಸ್ಚತ್ರಿ ಸಿರಿಡೋ ಪ್ರದಾನ ಮಾಡಿದರು.
ಪ್ರಶಸ್ತಿಯು ಇಪ್ಪತ್ತೆರಡು ಲಕ್ಷ ರೂಪಾಯಿ ನಗದು.ಪ್ರಶಸ್ತಿ ಫಲಕ ಮತ್ತು ತಾಂಬೂಲವನ್ನು ಒಳಗೊಂಡಿದೆ.
ಚಿತ್ರ ದುರ್ಗ ಜಿಲ್ಲೆ ತುಮ್ಮಿಗ್ರಾಮದವರಾದ ಡಾ.ದಿಲೀಪ್ ಕುಮಾರ್ ಕಳೆದ ನಾಲ್ಕು ದಶಕಗಳಿಂದ ನರ್ಸಿಂಗ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಇಂಡಿಯನ್ ನರ್ಸಿಂಗ್ ಕೌನ್ಸಿಲ್ ನ ಅಧ್ಯಕ್ಷರಾಗಿ. ಡಾ. ದಿಲೀಪ್ ಕುಮಾರ್ ಭಾರತದ ನರ್ಸಿಂಗ್ ವ್ಯವಸ್ಥೆ ಗೆ ಹೊಸ ಆಯಾಮವನ್ನು ಮೂಡಿಸಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತಂದುಕೊಟ್ಟಿದ್ದಾರೆ.
