
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಮೋಗದ್ದುಂಪೂರ ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ಮಕ್ಕಳು 9ಜನ ಹಾಗೂ ಅಂಗನವಾಡಿಯ 5ಮಕ್ಕಳು ಜಟ್ರೋಪಾ ಸಸ್ಯ ಬೀಜಗಳು ಸೇವಿಸಿ ವಾಂತಿಯಿಂದ ಅಸ್ವಸ್ಥವಾದ ಹಿನ್ನೆಲೆಯಲ್ಲಿ ಕುಂಚಾವರಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಯಾವುದೇ ಅನಾಹುತ ಆಗದಂತೆ ಉತ್ತಮ ಚಿಕಿತ್ಸೆ ನೀಡಲಾಯಿತು ಎಂದು ಟಿಹೆಚ್ಓ ಮಹ್ಮುದ್ ಗಫಾರ್ ತಿಳಿಸಿದ್ದಾರೆ.
ಬುಧವಾರ ಕುಂಚಾವರಂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಹೆಚ್ಓ ಡಾ.ರಾಜಶೇಖರ ಮಾಲಿ ಭೇಟಿನೀಡಿ ಮಕ್ಕಳ ಯೋಗಕ್ಷೇಮ ಆರೋಗ್ಯ ವಿಚಾರಿಸಿದರು.ನಂತರ ಮಾತನಾಡಿದ ಅವರು,ವೈದ್ಯರು ಉತ್ತಮ ಚಿಕಿತ್ಸೆಯನ್ನು ಎಲ್ಲಾ ಮಕ್ಕಳಿಗೆ ನೀಡಿದ್ದಾರೆ ಮಕ್ಕಳು ಆರಾಮವಾಗಿ ಇದ್ದಾರೆ ಈಗಾಗಲೇ ಆಸ್ವತ್ರೇಯಿಂದ ಎಲ್ಲಾ ಮಕ್ಕಳಿಗೆ ಬಿಡುಗಡೆ ಮಾಡಲಾಗಿದೆ.ಜಟ್ರೋಪಾ ಸಸ್ಯದ ಬೀಜಗಳು ತಿಂದಿರುವುದರಿಂದ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದರು ಎಲ್ಲಾ ಮಕ್ಕಳು ಯೋಗಕ್ಷೇಮವಾಗಿದ್ದಾರೆಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡೆಫ್ಯೋಟಿ ಡೈರೆಕ್ಟರ್ ನವೀನಕುಮಾರ,ಕುಂಚಾವರಂ ಆಸ್ವತ್ರೆಯ ಎಎಂಓ ಡಾ.ಬಾಲಾಜಿ ಪಾಟೀಲ,ಮಕ್ಕಳ್ಳ ತಜ್ಞ ಡಾ.ಈಶ್ವರ ರಾಜ್,ಅಂಗನವಾಡಿ ಕಾರ್ಯಕರ್ತೆ ಪ್ರೇಮಿಳಾ ಹಾಗೂ ಅನೇಕರಿದ್ದರು.
