
ಉದಯವಾಹಿನಿ,ಪೀಣ್ಯ ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ಶ್ರೀರಾಮ ದೇವಸ್ಥಾನ ಹತ್ತಿರ ಆಟದ ಮೈದಾನದಲ್ಲಿ ಆಟೋ ಚಾಲಕರ ಆರಾಧ್ಯ ದೈವ ದಿವಂಗತ ಶಂಕರ್ ನಾಗ್ ಅವರ ಜನ್ಮದಿನ ಆಚರಣೆ ಅಂಗವಾಗಿ ಚಾಲಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಲಗ್ಗೆರೆ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಅವರ ಪತಿ ಲಗ್ಗೆರೆ ಕಾಂಗ್ರೆಸ್ ಪ್ರಭಾವಿ ಮುಖಂಡ ವಿದ್ಯಾರ್ಥಿಗಳ ಆಶಾಕಿರಣ ಮತ್ತು ಅರ್ಪಿತ ಸೇವಾ ಟ್ರಸ್ಟ್ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿದರು.
ಆಟೋ ಚಾಲಕನಾಗಿ ಜೀವನ ನಡೆಸಿದ್ದೇನೆ ಅದರಿಂದ ಆಟೋ ಚಾಲಕರ ಕಷ್ಟ ಸುಖ ನೋವುಗಳನ್ನು ಹತ್ತಿರದಿಂದ ಕಂಡಿದ್ದೇನೆ ನಮಗೆ ಮತ್ತು ನಿಮ್ಮೆಲ್ಲರಿಗೂ ಶಂಕರ್ ನಾಗ್ ರವರು ಸ್ಪೂರ್ತಿಯಾಗಿದ್ದಾರೆ ಅವರ ನಿದರ್ಶನಗಳನ್ನು ಇಟ್ಟುಕೊಂಡು ನಾವು ನೀವು ಅವರ ದಾರಿಯಲ್ಲಿ ನಡೆಯಬೇಕು ನಾನು ನಿಮ್ಮ ಕಷ್ಟ ಸುಖಕ್ಕೆ ನನ್ನ ಕೈಲಾದಷ್ಟು ಸಹಾಯ ಸಹಕಾರ ನೀಡುತ್ತೇನೆ ಎಂದು ಆಟೋ , ಟ್ಯಾಕ್ಸಿ ಚಾಲಕರಿಗೆ ಸನ್ಮಾನಿಸಿ ಸಮವಸ್ತ್ರ ಮತ್ತು ನೆನಪಿನ ಕಾಣಿಕೆ ನೀಡಿ ಮಾಜಿ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಹಾಗೂ ಕಾಂಗ್ರೆಸ್ ನಾಯಕ ನಾರಾಯಣ ಸ್ವಾಮಿ ಚಾಲಕರಿಗೆ ಭರವಸೆ ನೀಡಿದರು.
ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಜೆಡಿಎಸ್ ಹಿರಿಯ ಮುಖಂಡ ಅಂದಾನಪ್ಪ ಮಾತಾಡಿದರು.ಕರ್ನಾಟಕ ರಾಜ್ಯ ಚಾಲಕರ ಪರಿಷತ್ನ ಸಂಸ್ಥಾಪಕ ಅಧ್ಯಕ್ಷ ಸೋಮು ಸರ್ವರಿಗೂ ಸ್ವಾಗತಿಸಿದರು. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಐಪಿ ನಗರ ಯುವ ಮುಖಂಡ ಲೋಕೇಶ್, ಆಡುಗೋಡಿ ಶ್ರೀನಿವಾಸ್, ನವನೀತ, ಕರ್ನಾಟಕ ರಾಜ್ಯ ಚಾಲಕರ ಪರಿಷತ್ನ ಪದಾಧಿಕಾರಿಗಳು ಸದಸ್ಯರು ಲಗ್ಗೆರೆ ನಾರಾಯಣ ಸ್ವಾಮಿ ಅಭಿಮಾನಿಗಳು ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.
