ಉದಯವಾಹಿನಿ, ಐಪಿಎಲ್ 2026ರ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಇಯಾನ್ ಬೆಲ್ ಅವರು ಮ್ಯಾಥ್ಯೂ ಮೋಟ್ ಬದಲಿಗೆ ತಂಡದ ಹೊಸ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಲೆಜೆಂಡರಿ ಆಟಗಾರ ತೊರೆದಿದ್ದಾರೆ. ಹೌದು, ಐಪಿಎಲ್ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ನ ಲೆಜೆಂಡರಿ ಆಟಗಾರ ಕೆವಿನ್ ಪೀಟರ್ಸನ್ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಬೇರ್ಪಟ್ಟಿದ್ದಾರೆ .ಕಳೆದ ಐಪಿಎಲ್ ಆವೃತ್ತಿಯಲ್ಲಿ ಕೆವಿನ್ ಪೀಟರ್ಸನ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು, ಆದರೆ ಈಗ ಅವರು ಆ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪೀಟರ್ಸನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿರ್ಗಮನವನ್ನು ಘೋಷಿಸಿದ್ದಾರೆ. ಐಪಿಎಲ್ 2025 ರಲ್ಲಿ , ಪೀಟರ್ಸನ್ ಅವರ ಮಾರ್ಗದರ್ಶನದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನ ಗಳಿಸಿತು.
ಪೋಸ್ಟ್ನಲ್ಲಿ ಏನಿದೆ?
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ನಿರ್ಗಮಿಸುತ್ತಿರುವುದನ್ನು ಘೋಷಿಸುತ್ತಾ ಪೀಟರ್ಸನ್ ಟ್ವಿಟರ್‌ನಲ್ಲಿ ಹಿಂದಿಯಲ್ಲಿ ಹೇಳಿಕೆ ನೀಡಿದ್ದಾರೆ. “ಈ ಐಪಿಎಲ್ ಋತುವಿನಲ್ಲಿ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರ್ಗದರ್ಶಕನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಬೇಕಾದ ಸಮಯಕ್ಕೆ ನಾನು ಬದ್ಧನಾಗಿರಲು ಸಾಧ್ಯವಿಲ್ಲ. ಈ ಆವೃತ್ತಿಗಾಗಿ ಎಲ್ಲಾ ಆಟಗಾರರಿಗೆ ಶುಭಾಶಯಗಳು! ಆದರೂ ನಾನು ನಿಮ್ಮನ್ನು ಕಾಮೆಂಟರಿಯಟ್‌ನಲ್ಲಿ ಮತ್ತೆ ನೋಡುತ್ತೇನೆ! ಐಪಿಎಲ್ ವಿಶ್ವದ ಅತ್ಯುತ್ತಮ ಲೀಗ್ ಮತ್ತು ನಿಮ್ಮೆಲ್ಲರನ್ನೂ ಶೀಘ್ರದಲ್ಲೇ ನೋಡಲು ನಾನು ಕಾಯಲು ಸಾಧ್ಯವಿಲ್ಲ!” ಎಂದು ಬರೆದಿದ್ದಾರೆ.
