
ಉದಯವಾಹಿನಿ,ಕೆಂಭಾವಿ: ಮಂಗಳವಾರ ಸಾಯಂಕಾಲ ಸುರಿದ ಅಕಾಲಿಕ ಮಳೆಗೆ ಪಟ್ಟಣ ಸುತ್ತಮುತ್ತಲಿನ ರೈತರು ಬೆಳೆದಿದ್ದ ಭತ್ತದ ನೆಲಕಚ್ಚಿದೆ .ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದಿದ್ದ ಭತ್ತದ ಫಸಲು ಕೆಲವೇ ದಿನಗಳಲ್ಲಿ ಕಟಾವಿಗೆ ಬಂದು ನಿಂತಿತ್ತು ಕಳೇದ ಆರೇಳು ತಿಂಗಳಿನಿಂದ ಬರದ ಪರಿಸ್ಥಿತಿಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಸಾಲದ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ಸಿಲುಕಿದಂತಾಗಿದೆ.ರೈತರ ನೆರವಿಗೆ ಸರ್ಕಾರ ಬಂದು ನೆರವಾಗಬೇಕಿದೆ.
ಯಾಳಗಿ ಗ್ರಾಮದಲ್ಲಿರುವ ನಮ್ಮ ಸುಮಾರು ೩೦ ಎಕರೆ ಹೊಲದಲ್ಲಿ ಬೆಳೆದ ಭತ್ತದ ಬೆಳೆ ಅಕಾಲಿಕ ಮಳೆಗೆ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಕೂಡಲೇ ರೈತರಿಗೆ ನೆರವಿನ ಪರಿಹಾರ ಹಣ ಒದಗಿಸಬೇಕು. –ರಾಮನಗೌಡ ಹೊಸಮನಿ.ರೈತ
