ಉದಯವಾಹಿನಿ,ಕೋಲಾರ: ವಿಜಯೇಂದ್ರ ಅವರನ್ನು ಎಳಸು ಎಂದು ಹೇಳಿರುವ ಸಹಕಾರ ಸಚಿವ ರಾಜಣ್ಣ ಬಫೂನ್, ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ ಅವರಿವರು ಏನು ಹೇಳಿಕೊಟ್ರೆ ಅದು ಮಾತನಾಡುತ್ತಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ವೈ.ವಿಜಯೇಂದ್ರ ಕುರುಡುಮಲೆ ವಿನಾಯಕನ ದರ್ಶನ ನಂತರ ಮಲ್ಲಸಂದ್ರದಲ್ಲಿ ಬೂತ್ ಅದ್ಯಕ್ಷ ಮೂರ್ತಿ ಮನೆಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ವಿಜಯೇಂದ್ರ ಅವರನ್ನು ಎಳಸು ಎಂದು ಹೇಳಿರುವ ಸಹಕಾರ ಸಚಿವ ರಾಜಣ್ಣರಿಗೆ ವಯಸ್ಸಾಗಿದೆ, ಅರಳೋ ಮರಳು ಎಂಬಂತೆ ಮಾತನಾಡುತ್ತಾರೆ ಅಂತಹವರ ಮಾತಿಗೆ ಬೆಲೆ ಇಲ್ಲ ಎಂದು ಟೀಕಿಸಿ, ಒಂದು ಬಾರಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಅಂತಾರೆ ಏನಾದ್ರು ಹೇಳಿಕೊಟ್ಟರೆ ಪರಮೇಶ್ವರ್ ಸಿಎಂ ಆಗಬೇಕು ಎನ್ನುತ್ತಾರೆ, ಒಂದು ಸಾರಿ ಇದ್ದಂತೆ ಅವರು ಮನಸ್ಥಿತಿ ಒಂದು ಬಾರಿ ಇರದು ಎಂದು ವ್ಯಂಗ್ಯವಾಡಿದರು.
ಒಂದು ಬಾರಿ ಶಿವಕುಮಾರ್ ಪರ ಮಾತನಾಡಿದರೆ ಮತ್ತೊಂದು ಬಾರಿ ಶ್ಯಾಮನೂರು ಶಿವ ಶಂಕರಪ್ಪ ಪರವಾಗಿ ಮಾತನಾಡುತ್ತಾರೆ. ಅವರಿಗೆ ವಯಸ್ಸಾಗಿದೆ, ಮೊಮ್ಮಕಳ ಜೊತೆಗೆ ಆಟವಾಡಿಕೊಂಡಿರಬೇಕಾದವರು ಸಚಿವರಾಗಿದ್ದಾರೆ, ತಮಗೆ ವಯಸಾಗಿರೋದ್ದರಿಂದ ವಿಜಯೇಂದ್ರ ಯುವಕರು ಎಂಬುದನ್ನು ಸಹಿಸಲು ಆಗುತ್ತಿಲ್ಲ ಎಂದರು.
