ಉದಯವಾಹಿನಿ, ಕೋಲಾರ: ನಗರದ ಗಾಣಿಗರ ಬೀದಿಯ ಶ್ರೀರಾಮ ದೇವಸ್ಥಾನದ ಹತ್ತಿರವಿರುವ ಕೋಲಾರ ತಾಲೂಕು ಮುದ್ರಣಕಾರರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಸಂಘದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಚಿತ್ರಕಲೆ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಬಹದ್ದೂರ್ ಖಾನ್ ಅಲಿ, ಉಪಾಧ್ಯಕ್ಷ ಬ್ಯಾಲಹಳ್ಳಿ ಚೌಡೇಗೌಡ, ಕಾರ್ಯದರ್ಶಿ ಮಹೇಂದ್ರ ಕುಮಾರ್, ಸದಸ್ಯರುಗಳಾದ ವೇಮಗಲ್ ಮಂಜು, ಬೈಂಡರ್ ಮಂಜಣ್ಣ, ಸ್ಕ್ರೀನ್ ಪಿನ್ ಚಲಪತಿ, ಸುನಿಲ್‌ಕುಮಾರ್, ಶಿವಾ ಗ್ರಾಫಿಕ್ಸ್ ಶಿವಕುಮಾರ್, ಜಗದೀಶ್‌ಕುಮಾರ್ ಮತ್ತು ನವೀನ್ ಭಾಗವಹಿಸಿದ್ದರು.
