ಉದಯವಾಹಿನಿ, ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್. ನಾರಾಯಣಮೂರ್ತಿ ಅವರು ೭೦ ಗಂಟೆಗಳ ಕಾಲ ಕೆಲಸ ಮಾಡುವ ಹೇಳಿಕೆ ಮಾಧ್ಯಮಗಳಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ .ಈಗ ಮತ್ತೊಮ್ಮೆ ಅವರು ನೀಡಿದ ಹೇಳಿಕೆ ಜನಸಾಮಾನ್ಯರನ್ನಷ್ಟೇ ಅಲ್ಲ, ಸರ್ಕಾರಗಳನ್ನೂ ಯೋಚಿಸುವಂತೆ ಮಾಡುತ್ತದೆ.
ಕಾರ್ಯಕ್ರಮವೊಂದರಲ್ಲಿ ನಾರಾಯಣಮೂರ್ತಿ ಮಾತನಾಡಿ, ದೇಶದ ವಿಶೇಷ ಶಾಲಾ ಶಿಕ್ಷಕರ ಅಭಿವೃದ್ಧಿಗೆ ಒತ್ತು ನೀಡಿ. ಇದರೊಂದಿಗೆ ಶಿಕ್ಷಕರು ಮತ್ತು ಸಂಶೋಧಕರ ವೇತನವನ್ನು ಹೆಚ್ಚಿಸುವಂತೆಯೂ ಕೋರಿದ್ದಾರೆ.
ಶಿಕ್ಷಕರ ತರಬೇತಿಗಾಗಿ ಭಾರತವು ಸುಮಾರು ೨೫೦೦ ‘ಟ್ರೈನ್ ದಿ ಟೀಚರ್ ಕಾಲೇಜುಗಳನ್ನು ತೆರೆಯಬೇಕು ಎಂದು ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
ಹಿರಿಯ ಸಾಫ್ಟ್‌ವೇರ್ ಉದ್ಯಮಿ ಎನ್ ನಾರಾಯಣ ಮೂರ್ತಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ತಯಾರಿಸಲು ವಿಶ್ವ ಮತ್ತು ಭಾರತದ ೧೦,೦೦೦ ನಿವೃತ್ತ, ಹೆಚ್ಚು ನುರಿತ ಶಿಕ್ಷಕರನ್ನು ಅಂದರೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪರಿಣಿತರನ್ನು ಬುಧವಾರ ಆಹ್ವಾನಿಸಿದ್ದಾರೆ. ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತದಲ್ಲಿ ಭಾರತವನ್ನು ವಿಶ್ವಕ್ಕೆ ಸರಿಸಮಾನವಾಗಿ ನಿರ್ಮಿಸಬಹುದು. ಇದಕ್ಕಾಗಿ ಪ್ರತಿ ವರ್ಷ ೧ ಶತಕೋಟಿ ಡಾಲರ್ ಅಂದರೆ ಸುಮಾರು ೮೩೦೦ ಕೋಟಿ ರೂಪಾಯಿ ಖರ್ಚು ಮಾಡುವ ಬಗ್ಗೆ ಮಾತನಾಡಿದ್ದಾರೆ.
ಪ್ರತಿ ವರ್ಷ ದೇಶದ ಸುಮಾರು ೨.೫ ಲಕ್ಷ ಪ್ರಾಥಮಿಕ ಮತ್ತು ೨.೫ ಲಕ್ಷ ಪ್ರೌಢ ಶಿಕ್ಷಕರಿಗೆ ತರಬೇತಿ ನೀಡಬಹುದಾಗಿದೆ., ಅವರು ಭವಿಷ್ಯದ ಸವಾಲುಗಳಿಗೆ ಸಿದ್ಧರಾಗುತ್ತಾರೆ ಎಂದು ಹೇಳಿದ್ದಾರೆ.
ನಾವು ನಮ್ಮ ಶಿಕ್ಷಕರಿಗೆ ಗೌರವವನ್ನು ತೋರಿಸಬೇಕು , ಶಿಕ್ಷಕರು ಮತ್ತು ಸಂಶೋಧಕರಿಗೆ ಉತ್ತಮ ವೇತನ ನೀಡಬೇಕು. ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸಬೇಕು. ಅವರು ನಮ್ಮ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದಿದ್ದಾರೆ.
