
ಉದಯವಾಹಿನಿ, ಔರಾದ್ : ದೇಶದ ಅಭಿವೃದ್ಧಿಯಲ್ಲಿ ಇಂದಿರಾ ಗಾಂಧಿ ಕೊಡುಗೆ ಅಪಾರವಾಗಿದೆ ಇವರು ದೇಶ ಕಂಡ ಅದ್ಭುತ ಪ್ರಧಾನಿ, ಅನೇಕ ಮಹತ್ತರ ನಿರ್ಧಾರ ಕೈಗೊಳ್ಳುವ ಮೂಲಕ ದೇಶವನ್ನು ಮುನ್ನಡೆಸಿದವರು ಇಂದಿರಾಗಾಂಧಿ ಅವರು ಇಂದಿನ ಅನೇಕ ಮಹಿಳೆಯರಿಗೆ ಮಾದರಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬಂಟಿ ದರ್ಬಾರೆ ಹೇಳಿದರು. ಪಟ್ಟಣದಲ್ಲಿ ದವಿದ್ಯಾರ್ಥಿ ಬಂಧುತ್ವ ವೇದಿಕೆಯ ಕಛೇರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ರವರ ಜಯಂತೋತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಇಂದಿರಾಗಾಂಧಿ ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ ಅವರು ಈ ನಾಡಿಗೆ ಪ್ರಧಾನಿಯಾಗಿ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು. ವಿದ್ಯಾರ್ಥಿ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ರತ್ನದೀಪ್ ಕಸ್ತೂರೆ ಮಾತನಾಡಿ, ದಿನ ದಲಿತರೋದ್ಧಾರಕ್ಕಾಗಿ ದುಡಿದು ಉಳುವವನೇ ಭೂಮಿಯ ಒಡೆಯ ಎಂಬ ಘೋಷಣೆ ಮಾಡುವ ಮೂಲಕ ಜನಪ್ರಿಯರಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೆನೆದು ಅವರ ಜಯಂತಿಯನ್ನಾಚರಿಸಲು ಹರ್ಷವೆನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಚಂದು, ರಾಹುಲ್ ಜಾಧವ, ಧಮ್ಮದೀಪ, ಬಬ್ಲು ಶಾ, ರೋಹಿತ್ ಕಾಂಬ್ಳೆ ಉಪಸ್ಥಿತರಿದ್ದರು.
