ಉದಯವಾಹಿನಿ, ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೊಲೀಸರು ಆ ಪಕ್ಷದ ಏಜೆಂಟರ್ ಆಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ಪಾಕಿಸ್ತಾನ ಆಗುತ್ತದೆ ಎಂದು ನಾವು ಆಗಲೂ ಹೇಳಿದ್ದೆವು. ಈಗಲೂ ಹೇಳುತ್ತೇವೆ. ಒಂದು ಸಮುದಾಯವನ್ನು ಓಲೈಸಿಕೊಳ್ಳುವ ಭರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಕಿಡಿಕಾರಿದರು.ಪೊಲೀಸರು ಕಾಂಗ್ರೆಸ್‍ನವರ ಕೈಗೊಂಬೆಯಾಗಿದ್ದಾರೆ.

ಕೇವಲ ಬಿಜೆಪಿ ಮತ್ತು ಬೇರೆ ಪಕ್ಷದವರನ್ನು ಗುರಿಯಾಗಿಟ್ಟುಕೊಂಡು ಕೆಲವರು ಹಲ್ಲೆ ಮಾಡುತ್ತಿದ್ದಾರೆ.ಇದಕ್ಕೆ ಸರ್ಕಾರದ ಕುಮ್ಮಕ್ಕು ಕೂಡ ಇದೆ ಎಂದು ಗುಡುಗಿದರು.ದೆಹಲಿಯಲ್ಲಿ ಒಬ್ಬರು ಮೇಡಂ ಇದ್ದರೆ, ಬೆಳಗಾವಿಯಲ್ಲಿ ಇನ್ನೊಬ್ಬ ಮೇಡಂ ಇದ್ದಾರೆ. ಅವರನ್ನು ಓಲೈಸಿಕೊಳ್ಳಲು ಚಾಕು ಇರಿತದಂತಹ ಪ್ರಕರಣಗಳನ್ನೇ ಸರ್ಕಾರ ಮುಚ್ಚಿ ಹಾಕಲು ಹೊರಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಸಂಬಂಧಿಕರ ಮೇಲೆ ಲೋಕಾ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯಾರೇ ಭ್ರಷ್ಟಾಚಾರ ಮಾಡಿದರೂ ಅದು ಭ್ರಷ್ಟಾಚಾರವೇ. ಅದರಲ್ಲಿ ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ತಪ್ಪು ತಪ್ಪೇ ಎಂದು ಮಾರ್ಮಿಕವಾಗಿ ನುಡಿದರು.

Leave a Reply

Your email address will not be published. Required fields are marked *

error: Content is protected !!