ಉದಯವಾಹಿನಿ, ತಾಳಿಕೋಟೆ : ಈ ನಮ್ಮ ದೇಶದಲ್ಲಿ ಸಾಕಷ್ಟು ಹಬ್ಬಗಳು ಬಂದರೂ ಕೂಡಾ ಎಲ್ಲ ಹಬ್ಬಗಳು ಧರ್ಮದ ಹಾದಿಯಲ್ಲಿ ನಡೆಯುವಂತವುಗಳಾಗಿವೆ ಅಂತಹ ಸಾಲಿನಲ್ಲಿ ಕಾರ್ತಿಕ ಮಾಸದಲ್ಲಿ ಧರ್ಮದ ಸಂಪ್ರದಾಯವಾಗಿ ಜ್ಯೋತಿ ಬೆಳಗಿಸಲಾಗುತ್ತಿದೆ ಎಂದು ಶ್ರೀ ಸಾಂಬಪ್ರಭು ಶರಣಮುತ್ಯಾ ಮಂದಿರದ ಪೂಜ್ಯ ಶ್ರೀ ಬಸಣ್ಣನವರು ಶರಣರು ನುಡಿದರು.
ರವಿವಾರರಂದು ಪಟ್ಟಣದ ಶ್ರೀ ಸಾಂಭಪ್ರಭು ಶರಣಮುತ್ಯಾರ ಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆಯೋಜಿಸಲಾದ ದೀಪೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡುತ್ತಿದ್ದ ಅವರು ಕಾರ್ತಿಕ ಮಾಸವು ಎಲ್ಲರ ಮನ ಮಂದಿರಗಳಲ್ಲಿ ಜ್ಯೋತಿ ಬೆಳಗಿಸುವಂತಹದ್ದಾಗಿದೆ ಈ ಹಬ್ಬದ ಉದ್ದೇಶ ಮನುಷ್ಯನಲ್ಲಿ ಅಡಗಿರುವ ಅಂದಕಾರವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಿಸುವಂತಹದ್ದಾಗಿದೆ ಅನೇಕ ಬೆಳಿಕಿನ ಹಬ್ಬಗಳು ಬರುತ್ತದೆ ಅವುಗಳನ್ನು ಆಚರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದ್ದಾಗಿದೆ ಅದರಲ್ಲಿ ವಿಶೇಷವಾಗಿ ಕಾರ್ತಿಕಮಾಸವು ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಎಲ್ಲರ ಮನೆಗಳಲ್ಲಿ ಮನಗಳಲ್ಲಿ ಉಜ್ವಲ ಜ್ಯೋತಿ ಬೆಳಗಲಿ ಎಂಬ ಉದ್ದೇಶ ಈ ಮಾಸದ್ದಾಗಿದೆ ಈ ಬೆಳಗುವ ಜ್ಯೋತಿಯಲ್ಲಿ ಅಷ್ಟದೇವತೆಗಳು ಒಳಗೊಂಡಿರುತ್ತಾರೆ ಅಜ್ಞಾನದ ಕತ್ತಲೆಯಲ್ಲಿ ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗಲಿ ಎಂಬ ಉದ್ದೇಶದಿಂದ ಎಲ್ಲಡೆಯಲ್ಲಿಯೂ ದೀಪವನ್ನು ಹಚ್ಚುತ್ತಾರೆ ಪ್ರತಿ ಊರು, ಗ್ರಾಮ ಪಟ್ಟಣಗಳಲ್ಲಿಯೂ ಕಾರ್ತಿಕ ಮಾಸದಲ್ಲಿ ಎಲ್ಲ ದೇವಸ್ಥಾನಗಳಲ್ಲಿ ಭಕ್ತರು ವಿಶೇಷವಾಗಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾ ಸಾಗಿದ್ದಾರೆ

Leave a Reply

Your email address will not be published. Required fields are marked *

error: Content is protected !!