ಉದಯವಾಹಿನಿ, ಸಿರವಾರ: ಜಾನಪದ ಕಲಾ ತಂಡ ಮುಖಾ ಮುಖಿ ರಂಗ ಸಂಸ್ಥೆ ರಾಯಚೂರು ಇವರಿಂದ ಜನ ಜಾಗೃತಿ ಕಾರ್ಯಕ್ರಮವನ್ನು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಾರ್ವಜನಿಕರಿಗೆ ರಾಷ್ಟ್ರೀಯ ಕಾರ್ಯಕ್ರಮಗಳದ ಕುಷ್ಠರೋಗ ನಿರ್ಮೂಲನಾ, ಕ್ಷಯ ರೋಗ ಪತ್ತೆ-ಚಿಕಿತ್ಸೆ, ಪೌಷ್ಟಿಕಾಂಶ ಆಹಾರ, ಗರ್ಭಿಣಿ ಸ್ತ್ರೀ, ಸುಸಜ್ಜಿತವಾದ ಆಸ್ಪತ್ರೆಯ ಹೆರಿಗೆ ತಾಯಿ ಮತ್ತು ಮಕ್ಕಳ ಆರೈಕೆ, ಆಯುಷ್ಮಾನ ಭಾರತ ಎಬಿಪಿಎಂಜೆಎವೈ ಕಾರ್ಡ್‌ನ ಉಪಯೋಗ, ಭ್ರೂಣಹತ್ಯೆ ತಡೆಗಟ್ಟುವ ಬಗ್ಗೆ, ಇನ್ನಿತರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಮತ್ತು ಯೋಜನೆಗಳು ಕುರಿತು ಬೀದಿ ನಾಟಕದ ಮೂಲಕ ಪ್ರದರ್ಶನ ಮಾಡಿ ಸಾರ್ವಜನಿಕ ಸಂಪೂರ್ಣವಾಗಿ ಮಾಹಿತಿ ನೀಡಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಾಲಿಂಗ ಪೂಜಾರಿ, ಆಶಾ ಕಾರ್ಯಕರ್ತೆಯರಾದ ಜರೀನ, ಯಮುನಮ್ಮ, ರೇಣುಕಮ್ಮ, ಜಾನಪದ ಕಲಾ ತಂಡಗಳು ಮುಖಾ ಮುಖಿ ರಂಗ ಸಂಸ್ಥೆ ರಾಯಚೂರು ಸಿಬ್ಬಂದಿ ನಿರ್ಮಲಾ ವೇಣುಗೋಪಾಲ್ ಮತ್ತು ಇತರರು ಇದ್ದರು.
