ಉದಯವಾಹಿನಿ, ಬೆಂಗಳೂರು : ವಿಶೇಷ ಅಗತ್ಯವುಳ್ಳ ಮಕ್ಕಳ ವಿಶಿಷ್ಟ ಸವಾಲುಗಳನ್ನು ಪರಿಹರಿಸುವ ಸಾಮಾಜಿಕ ಉದ್ಯಮವಾದ ಪ್ರಾಕ್ರಮಿಕಾ ವೊಕೇಶನಲ್ ಇನ್‌ಸ್ಟಿಟ್ಯೂಟ್ (ಪಿವಿಐ), ನರ ವ್ಯತಿರಿಕ್ತ ವ್ಯಕ್ತಿಗಳಿಗೆ ಸೀಮಿತವಾದಂತೆ ವಿಶೇಷ ಘಟಿಕೋತ್ಸವ ಸಮಾರಂಭವನ್ನು ಇಂದು ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಿತು. ವಿಶೇಷ ವಿದ್ಯಾರ್ಥಿಗಳನ್ನು ಘಟಿಕೋತ್ಸವದಲ್ಲಿ ಗೌನ್ ಧರಿಸಿ ವೇದಿಕೆ ಏರುವಂತೆ ಮಾಡಿದ್ದು, ಗಣ್ಯರಿಂದ ಪ್ರಮಾಣ ಪತ್ರವನ್ನು ಪ್ರದಾನ ಮಾಡಿದ್ದು, ನ್ಯೂರೋಡೈವಜೆರ್ಂಟ್ ವಿದ್ಯಾರ್ಥಿಗಳಿಗೆ ನಿಜಕ್ಕೂ ಉತ್ತಮ ಕ್ಷಣವಾಗಿತ್ತು.
ಘಟಿಕೋತ್ಸವ ಸಮಾರಂಭದಲ್ಲಿ ಸುಮಾರು ೧೦೦ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿ, ಇಸ್ರೋದ ಸಲಹೆಗಾರ ಡಾ. ಸುರೇಂದ್ರ ಪಾಲ್, ಹೆಸರಾಂತ ವೆಂಟ್ರಿಲೋಕ್ವಿಸ್ಟ್ ಇಂದುಶ್ರೀ ರವೀಂದ್ರ ಮತ್ತು ಗೌರವ ಪ್ರಧಾನ ಕಾರ್ಯದರ್ಶಿ ಡಾ. ವುಡೆ ಪಿ ಕೃಷ್ಣ ಅವರ ಉಪಸ್ಥಿತಿಯಲ್ಲಿ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ನೀಡಿದರು. ಶ್ರವಣದೋಷವುಳ್ಳವರ ನೃತ್ಯ ಮತ್ತು ವಿಶೇಷ ಅಗತ್ಯವುಳ್ಳವರು ಅತಿಥಿಗಳಿಗೆ ಉಡುಗೊರೆಗಳನ್ನು ನೀಡಿದರು.
