ಉದಯವಾಹಿನಿ, ಕೆಂಗೇರಿ: ಯಶವಂತಪುರ ಕ್ಷೇತ್ರದ ಉಲ್ಲಾಳ್ ವಾರ್ಡಿನ ರಾಜರಾಜೇಶ್ವರಿ ಬಡಾವಣೆ, ನಾಗದೇವನಹಳ್ಳಿಯ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಶ್ರೀ ಹನುಮ ಜಯಂತಿ ಹಾಗೂ ಶ್ರೀರಾಮ ತಾರಕ ಹೋಮ, ಸೀತಾರಾಮ ಕಲ್ಯಾಣೋತ್ಸವವನ್ನು ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದರು.
ಬೆಳಗ್ಗೆಯಿಂದಲೇ ವೀರಾಂಜನೇಯ ಸ್ವಾಮಿಗೆ ಮಹಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು. ಹೋಮ-ಹವನದ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ತುಳಸಿ ಅರ್ಚನೆ ಹಾಗೂ ಮಹಾಮಂಗಳಾರತಿ ಬೆಳಗಿ ಇಷ್ಟಾರ್ಥಗಳೊಂದಿಗೆ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಲಾಯಿತು. ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು ಇದೇ ಸಂದರ್ಭದಲ್ಲಿ ಅನ್ನದಾಸೋಹವನ್ನು ಏರ್ಪಡಿಸಿದರು.
ಟ್ರಸ್ಟಿನ ಗೌರವಾಧ್ಯಕ್ಷ ಎಂ. ಸಿ. ಶಿವಕುಮಾರ್, ಅಧ್ಯಕ್ಷ ಪಿ.ಜಿ. ಗಿರೀಶ್, ಉಪಾಧ್ಯಕ್ಷ ಜೆ. ದೊಡ್ಡಯ್ಯ, ಕಾರ್ಯದರ್ಶಿ ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಅನುಚಂದ್ರಕಾಂತ, ರಾಮಣ್ಣ, ಯಶವಂತಪುರ ಕ್ಷೇತ್ರದ ಜೈ ಕರ್ನಾಟಕ ಅಧ್ಯಕ್ಷ ವಿಜಯ್ ಕುಮಾರ್ ಕೆ .ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ನಾಗದೇವನಹಳ್ಳಿ ಹಾಗೂ ಅಕ್ಕಪಕ್ಕದ ಬಡಾವಣೆಯ ಭಕ್ತಾದಿಗಳು ಉಪಸ್ಥಿತರಿದ್ದರು.
