ಉದಯವಾಹಿನಿ, ಕನಕಪುರ: ಕನ್ನಡ ಭಾಷೆ ಮತ್ತು ನಾಡಿಗಾಗಿ ಹೋರಾಟ ಮಾಡುತ್ತಿರುವ ಚಳವಳಿಗಾರರನ್ನು ಬಂಧಿಸಿರುವುದು ಖಂಡನೀಯ. ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕೆಂದು ಕರವೇ ಜಿಲ್ಲಾಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ಒತ್ತಾಯಿಸಿದರು.ತಾಲ್ಲೂಕು ಕಚೇರಿ ಮುಂಭಾಗ ಸರ್ಕಾರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿ ಇಟ್ಟಿರುವುದನ್ನು ವಿರೋಧಿಸಿ ಗುರುವಾರ ಕರವೇ ವತಿಯಿಂದ ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದರು.
ಕನ್ನಡ ಭಾಷೆ ಬಳಸದವರ ವಿರುದ್ಧ ಶಾಂತಿಯುತ ಹೋರಾಟ ನಡೆಸಿ, ಶೇ60ರಷ್ಟು ಕನ್ನಡ ಬಳಸದ ಫ್ಲೆಕ್ಸ್ ಮತ್ತು ಬೋರ್ಡ್ ತೆರವುಗೊಳಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕು ಅಧ್ಯಕ್ಷ ಜೈರಾಮು, ಶ್ರೀನಿವಾಸ್, ಅರುಣ್‌ಕುಮಾರ್, ಕೆ.ಡಿ.ಶೇಖರ್, ಉಮೇಶ್, ರಮೇಶ್, ರವಿ, ಪ್ರಶಾಂತ್, ಅಂದಾನಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.
