ಉದಯವಾಹಿನಿ, ತುಮಕೂರು: ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಅರೆಗುಜ್ಜನಹಳ್ಳಿ ಹೊರ ವಲಯದಲ್ಲಿ ಬುಧವಾರ ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆಯಾಗಿದೆ. ತಾಯಿಯೇ ತನ್ನ ಮಗುವನ್ನು ಊರಾಚೆ ಎಸೆದು ಹೋಗಿದ್ದಾರೆ.
25 ವರ್ಷದ ಯುವತಿ ಮದುವೆಯಾಗದೆ ವ್ಯಕ್ತಿಯೊಬ್ಬರ ಜತೆಗೆ ಸಹಜೀವನ ನಡೆಸುತ್ತಿದ್ದರು.
ಮಂಗಳವಾರ ರಾತ್ರಿ ಹೆರಿಗೆಯಾಗುವ ಲಕ್ಷಣಗಳು ಕಂಡು ಬಂದಿದ್ದು, ಗ್ರಾಮದ ಹೋರ ಭಾಗಕ್ಕೆ ಬಂದು ಸ್ವತಃ ಹೆರಿಗೆ ಮಾಡಿಕೊಂಡಿದ್ದಾರೆ. ಸಾಮಾನ್ಯ ಹೆರಿಗೆಯಾಗಿದ್ದು, ಶಿಶುವನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.
ಇಡೀ ರಾತ್ರಿ ಚಳಿಗಾಳಿಗೆ ನರಳಿದ ಶಿಶು ಮೃತಪಟ್ಟಿದೆ. ಊರಿನ ಗ್ರಾಮಸ್ಥರು ಶಿಶುವಿನ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಯುವತಿಯ ವಿರುದ್ಧ ಮಹಿಳಾ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಯುವತಿ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!