ಉದಯವಾಹಿನಿ, ಕೋಲಾರ: ಶ್ರೀಮನ್ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಲ್ಲಿ ಒಬ್ಬರಾದ ತಂಬಿಹಳ್ಳಿ ಶ್ರೀಮನ್ ಮಾಧವತೀರ್ಥರ ಮೂಲ ಮಹಾ ಸಂಸ್ಥಾನದಲ್ಲಿ ೨೪ನೇ ಪೀಠಾಧಿಪತಿಗಳಾದ ಶ್ರೀ ಪ್ರಸನ್ನಶೂರ ಮಾಧವತೀರ್ಥ ಸ್ವಾಮೀಜಿ ಅವರ ೧೨ನೇ ಮಹಾಸಮಾರಾಧನೆ ಮಂಗಳವಾರ ಶ್ರೀ ಮಠದಲ್ಲಿ ಸಂಪನ್ನಗೊಂಡಿತು.
ತಾಲೂಕಿನ ಮುಳಬಾಗಿಲು ರಸ್ತೆ ತಂಬಿಹಳ್ಳಿಯಲ್ಲಿರುವ ಶ್ರೀ ಮಠದಲ್ಲಿ ಮಹಾಸಮಾರಾಧನೆ ಅಂಗವಾಗಿ ಶನಿವಾರ ಪೂರ್ವಾರಾಧನೆ, ಸೋಮವಾರ ಮಹಾಸಮಾರಾಧನೆ, ಹಾಗೂ ಮಂಗಳವಾರ ಉತ್ತರಾರಾಧನೆಗಳು ವ್ಯವಸ್ಥೆಗೊಂಡಿತ್ತು.
ಮಹಾಸಮಾರಾಧನೆಯ ಅಂಗವಾಗಿ ಸುಮಾರು ಹತ್ತು ಲಕ್ಷ ರೂ ವೆಚ್ಚದಲ್ಲಿ ಶ್ರೀ ಪ್ರಸನ್ನಶೂರ ಮಾಧವತೀರ್ಥರ ಬೃಂದಾವನಕ್ಕೆ ಭಕ್ತಾಧಿಗಳಿಂದ ಬೆಳ್ಳಿಯ ಕವಚ ಸಮರ್ಪಣೆಯಾಯಿತು. ಇದರ ಜೊತೆಗೆ ಜಪತಪಧ್ಯಾನಾದಿಗಳಿಗೆ ಅನುಕೂಲವಾಗುವಂತೆ ಶ್ರೀಪ್ರಸನ್ನಶೂರ ಮಾಧವ ತೀರ್ಥರ ಸ್ಮಾರಕವಾಗಿ ಆಹ್ನೀಕ ಮಂಟಪವನ್ನು ಸುಮಾರು ೩ ಲಕ್ಷ ರೂ ವೆಚ್ಚದಲ್ಲಿ ನವೀಕರಿಸಿ ಸಮರ್ಪಣೆಗೊಳಿಸಲಾಯಿತು.
