ಉದಯವಾಹಿನಿ, ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ: ಮಳೆಯ ಕೊರತೆಯಿಂದಾಗಿ ಸುಗ್ಗಿ ಹಬ್ಬ ಸಂಕ್ರಾಂತಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಕಳೆಗುಂದಿದೆ. ದಿನನಿತ್ಯ ಧಾನ್ಯಗಳು, ಹೂ, ಹಣ್ಣುಗಳ ಬೆಲೆಯು ಏರಿಕೆಯಾಗಿದೆ.
ಸಂಕ್ರಾಂತಿ ಹಬ್ಬದಲ್ಲಿ ಹೋರಿಗಳ ಪಾತ್ರವೇ ಪ್ರಮುಖ. ಆದರೆ ಇತ್ತೀಚಿನ ಕೃಷಿಯಲ್ಲಿ ಹೋರಿಗಳ ಬಳಕೆ ಕ್ಷೀಣಿಸುತ್ತಿರುವ ಹಿಂದಿನ ಸಂಭ್ರಮಾಚರಣೆಗಳು ಕಾಣುತ್ತಿಲ್ಲವಾಗಿದೆ.
ದೇವಾಲಯಗಳಲ್ಲಿ ವಿಶೇಷ ಪೂಜೆಗಳಿಗಳಿಗೆ ಸಿದ್ದತೆಗಳು ನಡೆಯುತ್ತಿವೆ. ಸಂಕ್ರಾಂತಿಯಂದು ಹೆಚ್ಚಾಗಿ ಬಳಸುವ ಕಡಲೇಕಾಯಿ ಕೆ.ಜಿಗೆ ₹80, ಎಳ್ಳು ಬೆಲ್ಲ ಕೆಜಿಗೆ ₹180, ಸಿಹಿ ಗೆಣಸು ₹40, ಕಬ್ಬು ಒಂದು ಜಳವೆಗೆ ₹50, ಅವರೇಕಾಯಿ ಕೆ.ಜಿಗೆ ₹70 ನಾಲ್ಕು ದಿನಗಳ ಹಿಂದಿನ ದರಕ್ಕೆ ಹೋಲಿಕೆ ಮಾಡಿದರೆ ಬೆಳೆಗಳು ₹10 ರಿಂದ ₹15 ಗಳವರೆಗೂ ಹೆಚ್ಚಾಗಿದೆ.
ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿದ್ದು ಕಾಕಡ ಕೆ.ಜಿಗೆ ₹800, ಕನಕಾಂಬರ ಕೆ.ಜಿಗೆ ₹1,500, ಸೇವಂತಿಗೆ, ಗುಲಾಬಿ ಮುಂತಾದ ಹೂವಿನ ಬೆಲೆಗಳು ₹200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ.
ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!