ಉದಯವಾಹಿನಿ, ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮನಿರಬಹುದು. ಆದರೆ ಅವರ ಕಾರ್ಯಗಳು ಕಾಲನೇಮಿ (ಅಸುರ)ನಂತಿವೆ ಎಂದು ಹನುಮಗಿರಿ ದೇವಸ್ಥಾನದ ಅರ್ಚಕ ಮಹಂತ್ ರಾಜು ದಾಸ್ ವಿವಾದದ ಕಿಡಿ ಹೊತ್ತಿಸಿದ್ದಾರೆ. ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.ಸಿದ್ದರಾಮಯ್ಯನವರು ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ಆದರೆ ಅವರ ಕಾರ್ಯವೈಖರಿ ಅಸುರನಂತಿದೆ. ಬಾಬರ್ ಬಗ್ಗೆ ಅವರಿಗೆ ಚಿಂತೆ, ದಾಳಿಕೋರರು ಹೆಚ್ಚಿನ ಜನರ ಭಾವನೆಗಳೊಂದಿಗೆ ಅವರು ಆಟವಾಡುತ್ತಿರುವ ರೀತಿ, ಬಿಜೆಪಿ ನಾಯಕ – ಸಿ.ಟಿ.ರವಿ ಹೇಳಿದ್ದು ತಪ್ಪಲ್ಲ ಎಂದು ಮಹಂತ್ ರಾಜು ದಾಸ್ ಸಮರ್ಥಿಸಿಕೊಂಡಿದ್ದಾರೆ. ಎಎನ್‍ಐಗೆ ಸುದ್ದಿ ಸಂಸ್ಥೆಗೆ ಮಾತನಾಡಿರುವ ಅವರು, ಗೈರು ಹಾಜರಾಗಲು ಮುಂದಾಗಿರುವುದು ದುರದೃಷ್ಟಕರ ಎಂದು ವಿಷಾದಿಸಿದ್ದಾರೆ.ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಜನವರಿ 22 ರಂದು ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠೆಯ ಮುಖ್ಯ ವಿಧಿಗಳನ್ನು ನಡೆಸಲಿದೆ. ಮಾಜಿ ಸಚಿವ ಸಿ.ಟಿ.ರವಿ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕರು ಹಾಗೂ ಪಕ್ಷವು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗಿಯಾಗದಿರಲು ಕಾರಣ, ಬಾಬರ್‍ನನ್ನು ಬಿಡಲು ಸಾಧ್ಯವಿಲ್ಲ ಎಂದು ಸಂದೇಶವನ್ನು ಸಾರಿದ್ದಾರೆ ಎಂದು ಹೇಳಿದ್ದಾರೆ. ಅವರ ಪಕ್ಷವು ಅವರು (ಪ್ರಾಣಪ್ರತಿಷ್ಠಾಪನೆಗೆ) ಹೋಗುವುದಿಲ್ಲ ಎನ್ನುವ ಮೂಲಕ ಕಾರ್ಯಕ್ರವನ್ನು ಬಹಿಷ್ಕಾರ ಹಾಕಿದ್ದಾರೆ. ಅವರು ಬಾಬರ್‍ನನ್ನು ಬಿಟ್ಟು ರಾಮನನ್ನು ಹಿಡಿಯಲು ಸಾಧ್ಯವಿಲ್ಲ. ಬಾಬರ್‍ನನ್ನು ಬಿಟ್ಟರೆ ರಾಮನನ್ನು ಹಿಡಿಯುವುದು ಸುಲಭ. ಆದರೆ, ಅದು ಅವರಿಗೆ ಸಿಗುವುದಿಲ್ಲ. ಬಾಬರ್ ಬಿಟ್ಟರೆ ಆ ಸಮುದಾಯದ ಓಲೈಕೆಗಾಗಿ ದೂರ ಸರಿದಿದ್ದಾರೆ. ರಾಮ ಎಲ್ಲರಿಗೂ ಸೇರಿದವನು. ಪ್ರಾಣ ಪ್ರತಿಷ್ಠಾಪನೆಯನ್ನು ಹಬ್ಬದಂತೆ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!