ಉದಯವಾಹಿನಿ, ಬೆಂಗಳೂರು: ಯೋಗಿ ವೇಮನರ ತತ್ವಾದರ್ಶಗಳು ಸಾರ್ವಕಾಲಿಕ ಪ್ರತಿಯೊಬ್ಬನು ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ರೆಡ್ಡಿಜನಸಂಘ ಬೆಂಗಳೂರು ಉತ್ತರವಲಯ , ರೆಡ್‌ಕ್ರಾಸ್ ವತಿಯಿಂದ ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನರ ೬೧೨ನೇ ಜಯಂತಿ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಯೋಗಿ ವೇಮನರು ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದರೂ ಸಹ ಜೀವನ ನಶ್ವರ ಎಂದು ಸರ್ವಸಂಘ ಪರಿತ್ಯಾಗಿಯಾಗಿ ಸಮಾಜಕ್ಕೆ ಸತ್ಸಂದೇಶ ಸಾರಿದರು. ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕಿದೆ ಎಂದರು.
ಕಳೆದ ೧೦ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತಾ ಬಂದಿದ್ದೇವೆ. ಇಲ್ಲಿವರೆಗೆ ೩೫೪೭ಯೂನಿಟ್ ರಕ್ತ ಸಂಗ್ರಹ ಮಾಡಿ ರೆಡ್‌ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ್ದೇವೆ. ಇಂದು ಸಹ ೪೫೦ಯೂನಿಟ್ ರಕ್ತ ಸಂಗ್ರಹ ಮಾಡುವ ಗುರಿ ಹೊಂದಿದ್ದೇವೆ ಎಂದು ಸಹಕಾರಿ ಸಂಘದ ನಿರ್ದೇಶಕ ಇಟಗಲ್‌ಪುರ ಮೋಹನ್ ಕುಮಾರ್ ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಗಳು ಉಪನ್ಯಾಸಕರು ಸೇರಿದಂತೆಸ್ವಯಂಪ್ರೇರಿತರಾಗಿ ಬಂದು ಸರತಿ ಸಾಲಿನಲ್ಲಿನಿಂತು ಆರೋಗ್ಯ ತಪಾಸಣೆ ನಂತರ ರಕ್ತದಾನ ಮಾಡಿದರು.
ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜೊತೆಗೆ ಫಹಾರದ ವ್ಯವಸ್ಥೆ ಮಾಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ರೆಡ್ಡಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಮುನಿರೆಡ್ಡಿ, ನಿರ್ದೇಶಕರಾದ ನರಸಿಂಹಮೂರ್ತಿ ಎಸ್‌ಟಿಡಿ ಮೂರ್ತಿ, ಸಂಪ್‌ಕುಮಾರ್, ರಾಜಣ್ಣ, ಅರುಣಾ ಪ್ರಕಾಶ್, ಗೀತಾ, ಶ್ರೀನಿವಾಸ್,ಎಸ್.ಜಿ. ಪ್ರಶಾಂತ್‌ರೆಡ್ಡಿ, ಜಯಪ್ಪರೆಡ್ಡಿ, ಅದ್ದೆವಿಶ್ವನಾಥಪುರ ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *

error: Content is protected !!