
ಉದಯವಾಹಿನಿ,ಹೊಸಕೋಟೆ : ಗಣೇಶೋತ್ಸವವನ್ನು ರಾಷ್ಟಿçÃಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡು ಜನರಲ್ಲಿ ದೇಶಾಭಿಮಾನ ಬೆಳೆಯಲು ಸಾಧ್ಯವಾಯಿತು. ಪುರಾತನ ಕಾಲದಿಂದಲೂ ಹಿರಿಯರು ನಿಗದಿತ ಕಾಲಕ್ಕೆ ಅನುಗುಣವಾಗಿ ಹಬ್ಬಗಳ ಆಚರಣೆಯನ್ನು ರೂಢಿಸಿಕೊಂಡಿದ್ದಾರೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎನ್. ಧರ್ಮೇಶ್ ಹೇಳಿದರು.ತಾಲೂಕಿನ ಕೊಂಡ್ರಹಳ್ಳಿಯಲ್ಲಿ ಶ್ರೀ ವಿನಾಯಕ ಯುವಕರ ಬಳಗದ ವತಿಯಿಂದ ಗಣೇಶ ವಿಸರ್ಜನೆ, ವಿವಿಧ ಉತ್ಸವ ಮೂರ್ತಿಗಳ ಮೆರವಣಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಗಳಲ್ಲಿ ಧಾರ್ಮಿಕ ಕರ‍್ಯಗಳನ್ನು ಆಚರಿಸುವುದರಿಂದ ಅಶಾಂತಿ ತೊಲಗಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಯುವಕರು ಸಂಘರ್ಷಕ್ಕೆ ಅವಕಾಶ ಕೊಡದೆ ಎಲ್ಲರೂ ಸಂಘಟಿತರಾಗಬೇಕು. ದೇಶ ರಕ್ಷಣೆಗೆ ಪಣ ತೊಟ್ಟು, ನಿಷ್ಠೆ ಪ್ರಾಮಾಣಿಕ ದುಡಿಮೆಯಿಂದ ನೆಮ್ಮದಿಯ ಜೀವನ ಸಾಗಿಸುವಂತಾಗಬೇಕು. ಉತ್ಸವಗಳ ಆಚರಣೆಯಿಂದ ಭಗವಂತÀ ಕೃಪೆ ತೋರಿ ಮಳೆ, ಬೆಳೆ ಸಮೃದ್ದಿಯಾಗಿ ಗ್ರಾಮ ಸುಭಿಕ್ಷವಾಗಿರುತ್ತದೆ ಎಂದರು.ಇದೇ ಸಂದರ್ಭದಲ್ಲಿ ಶ್ರೀಧರ್ಮೇಶ್ವರ, ಶ್ರೀವೇಣುಗೋಪಾಲಸ್ವಾಮಿ, ಶ್ರೀಮುನೇಶ್ವರ, ಗಂಗಮ್ಮ, ಚೌಡೇಶ್ವರಮ್ಮ, ಸಪಲಮ್ಮ, ಶ್ರೀವಿಘ್ನೇಶ್ವರ ೦೭ ವಿವಿಧ ದೇವರುಗಳ ಉತ್ಸವ ಮೂರ್ತಿ ಹಾಗೂ ಪುನೀತ್ ಭಾವಚಿತ್ರವನ್ನು ಅಲಂಕಾರಿಕ ಹೂ, ವಿದ್ಯುತ್ ದೀಪಗಳಿಂದ ಅಲಂಕೃತವಾದ ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು, ತಮಟೆ, ಮಂಗಳ ವಾದ್ಯಗಳ ನಿನಾದದೊಂದಿಗೆ ವೀರಗಾಸೆ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಪೂಜೆ ಸಲ್ಲಿಸಲಾಯಿತು. ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿ ತಡರಾತ್ರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.
ಕಾರ್ಯಕ್ರಮದ ನೇತೃತ್ವವನ್ನು ಸೇವಕರ್ತರಾದ ರಾಮಕ್ಕ ನಾರಾಯಣಪ್ಪ, ಗೌರಮ್ಮ ಕನ್ನಮಂಗಲದಪ್ಪ, ಬೈಯ್ಯಣ್ಣ, ಚೊಕ್ಕಪ್ಪ ಕುಟುಂಬಸ್ಥರು, ಗ್ರಾಪಂ. ಸದಸ್ಯರಾದ ಮಂಜುನಾಥ್, ಮುನಿವೆಂಕಟಮ್ಮ ಬಚ್ಚಪ್ಪ, ಮುಖಂಡರಾದ ಮುನಿರತ್ನಪ್ಪ, ರಾಮ, ಲಕ್ಷö್ಮಣ್, ಕರ್ಣ, ಬಸಪ್ಪ, ರವಿಶಂಕರ್, ದೇವರಾಜ್, ಗಂಗಾಧರ್, ನಂಜುAಡಮೂರ್ತಿ, ನಟರಾಜ್ ಹಾಗೂ ಇತರರು ವಹಿಸಿದ್ದರು.
