
ಉದಯವಾಹಿನಿ,ದೇವನಹಳ್ಳಿ : ಶರನ್ನವರಾತ್ರಿ ಅಂಗವಾಗಿ ಪಟ್ಟಣದ ತಾಲ್ಲೂಕು ಕಛೇರಿ ರಸ್ತೆಯಲ್ಲಿರುವ ಸರ್ವಶಕ್ತಾತ್ಮಕೆಶ್ರೀ ಚೌಡೇಶ್ವರಿ ದೇವಿಗೆ 9 ದಿನಗಳ ಕಾಲ ವಿಶೇಷ ಅಲಂಕಾರ ಹಾಗು ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚು ಭಕ್ತಾಧಿಗಳು ಪೂಜಾ ಕೈಂಕರ್ಯಗಳಲ್ಲಿ ಭಾಗವಸುವಂತೆ ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಅಬಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಬಯಪ ಮಾಜಿ ಅಧ್ಯಕ್ಷ ಎಸ್.ಎಲ್.ಎನ್ ಅಶ್ವಥ್‌ನಾರಾಯಣ್ ತಿಳಿಸಿದ್ದಾರೆ ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿರುವ ಸರ್ವಶಕ್ತಾತ್ಮಕೆ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಕಳೆದ 9 ವರ್ಷಗಳ ಹಿಂದೆ ಸ್ಥಾಪಿತವಾದ ದೇವಾಲಯ ಜಿಲ್ಲೆಯಾದ್ಯಂತ ಸಾವಿರಾರು ಭಕ್ತಾದಿಗಳು ನವರಾತ್ರಿ ವಿಶೇಷ ಪೂಜಾಕೈಂಕರ್ಯಗಳಲ್ಲಿ ಭಾಗವಹಿಸುತ್ತಿದ್ದು. ಭಕ್ತಾದಿಗಳ ಇಷ್ಟಾರ್ಥಗಳನ್ನು ದೇವಿ ಇಡೇರಿಸುತ್ತಿದ್ದಾಳೆ ಈ ವರ್ಷ ಶರನ್ನವರಾತ್ರಿ ಅಂಗವಾಗಿ ಸೆ.26 ಅರಿಶಿನ ಕುಂಕುಮ ಅಲಂಕಾರ, ಸೆ.27 ಗಂಧದ ಅಲಂಕಾರ, ಸೆ.28 ಹಣ್ಣುಗಳ ಅಲಂಕಾರ ಸೆ.29 ಡ್ರೈಪ್ರೂಟ್ಸ್ ಅಲಂಕಾರ, ಸೆ.30 ವಸ್ರದೋಪ ಅಲಂಕಾರ ಅ.1 ಹರಿಶಿನಕುಂಕುಮ ಅಲಂಕಾರ, ಅ.2 ಸರಸ್ವತಿ ಅಲಂಕಾರ, ಅ.3 ವಿಶೇಷ ಹೂವಿನ ಅಲಂಕಾರ, ಅ.4 ರಂದು ಆಯುಧ ಪೂಜೆ ಅಂಗವಾಗಿ ಶಾಖಾಂಬರಿ ಅಲಂಕಾರ ಅ.5 ರಂದು ವಿಜಯದಶಮಿ ಅಂಗವಾಗಿ ಚಾಮುಂಡೇಶ್ವರ ಅಲಂಕಾರ ಹಾಗು ಪ್ರತಿದಿನ ವಿಶೇಷ ಆಹ್ವಾನಿತರು ಹಾಗು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಜನತೆ ಪೂಜಾ ಕೈಂಕರ್ಯಗಳನ್ನು ಭಾಗವಹಿಸುವಂತೆ ತಿಳಿಸಿದ್ದಾರೆ. ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಟ್ರಸ್ಟ್ನ ಸದಸ್ಯ ಗಂಗಾಧರ್ ಮಾತನಾಡಿ ಕಳೆದ 9 ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾದ ಅಮ್ಮನವರಿಗೆ ಪ್ರತಿವರ್ಷ ವಿಶೇಷ ಪೂಜಕೈಂಕರ್ಯಗಳನ್ನು ನೆರವೇರಿಸುತ್ತಾ ಸಾವಿರಾರು ವಿವಿಧ ಜಿಲ್ಲೆಗಳಿಂದ ಭಕ್ತರನ್ನು ಭಾಗವಹಿಸುತ್ತಿದ್ದಾರೆ. ಸೆ.25 ರ ಮಹಾಲಾಯ ಅಮಾವಾಸ್ಯೆ ಅಂಗವಾಗಿ ಶ್ರೀದುರ್ಗಾ ಹೋಮ ಹಮ್ಮಿಕೊಳ್ಳಲಾಗಿದೆ. ಸೆ.27 ರಂದು ಜಿಲ್ಲಾಧಿಕಾರಿ ಅವರು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಪ್ರತಿನಿತ್ಯ ಅಮ್ಮನವರಿಗೆ ವಿಶೇಷ ಮಂಗಳ ದ್ರವ್ಯಗಳಿಂದ ಅಭಿಷೇಕ, ಸಹಸ್ರನಾಮ ಪ್ರಾಯಣ, ಹಾಗೂ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಹಾಗೂ ದಾಸೋಹ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನವರಾತ್ರಿ ದಿನಗಳಲ್ಲಿ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ನ ಸದಸ್ಯರಾದ ಎಸ್.ಆರ್.ಮುನಿರಾಜು, ಜಯರಾಮ್, ಶ್ರೀರಾಮಯ್ಯ, ಗೋಪಿ ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಸೇರಿದಂತೆ ಅನೇಕರು ಇದ್ದರು.
