ಉದಯವಾಹಿನಿ, ಬೆಂಗಳೂರು: ನಗರದ ಚಂದ್ರಾಲೇಔಟ್‌ನಲ್ಲಿ ಅತಿ ಎತ್ತರದ ೨೧೫ ಅಡಿ ಧ್ವಜಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಾಡಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ರಾಷ್ಟ್ರಧ್ವಜ ಸ್ತಂಭವನ್ನು ಲೋಕಾರ್ಪಣೆ ಮಾಡಿ, ಧ್ವಜಾರೋಹಣ ಮಾಡಿದರು.
ವಿಜಯನಗರ ಶಾಸಕ ಎಂ. ಕೃಷ್ಣಪ್ಪ, ಗೋವಿಂದರಾಜನಗರ ಶಾಸಕ ಪ್ರಿಯ ಕೃಷ್ಣ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಿದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಲಾಯಿತು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೧ ಕೋಟಿ ವೆಚ್ಚದಲ್ಲಿ ಧ್ವಜ ಸ್ತಂಭ ನಿರ್ಮಾಣವಾಗಿದೆ.ಇಲ್ಲಿವರೆಗೆ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ ೨೧೩ ಅಡಿ ಎತ್ತರದ ಧ್ವಜಸ್ತಂಭ ಅತಿ ಎತ್ತರದ ಸ್ತಂಭವಾಗಿತ್ತು. ೧೯ ಟನ್ ತೂಕವಿರುವ ಕಂಬದ ಮೇಲ್ಬಾಗದಲ್ಲಿ ೫ ಅಡಿಯ ಅಶೋಕ ಚಕ್ರ, ಸಿಂಹಗಳ ಲಾಂಛನವಿದ್ದು, ರಾಷ್ಟ್ರಧ್ವಜವನ್ನು ಕೈಯಿಂದಲೂ, ಯಾಂತ್ರಿಕವಾಗಿಯೂ ಏರಿಸಿ ಇಳಿಸಲು ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ನ್ಯಾ.ನಾಗಮೋಹನ್‌ದಾಸ್ ಸಂವಿಧಾನ ನಮ್ಮ ದೇಶದ ಮಹಾನ್ ಗ್ರಂಥ. ಇಂತಹ ಮಹಾನ್ ಗ್ರಂಥದ ಸಂವಿಧಾನವನ್ನು ಕೆಲವರು ಅಪವ್ಯಾಖ್ಯಾನ ಮಾಡುತ್ತಿರುವುದು ಕಳವಳಕಾರಿ ಸಂಗತಿ. ಇದರಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ಸಂವಿಧಾನ ಓದದವರು ಅರ್ಥಮಾಡಿಕೊಳ್ಳದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ನಾವು ನಮ್ಮ ಸಂವಿಧಾನ ಓದಿ ಅರ್ಥೈಸಿಕೊಂಡು ಬದುಕುತ್ತೇವೆ ಎಂದು ಈ ವೇಳೆಯಲ್ಲಿ ಶಪಥ ಮಾಡಬೇಕಿದೆ. ಸಂವಿಧಾನವೇ ಇಲ್ಲವೆಂದಾದಲ್ಲಿ ಬಾಯಿಗೆ ಬೀಗಹಾಕಿ ಗುಲಾಮರಂತೆ ಬಾಳಬೇಕಾಗುತ್ತದೆ ಎಂದು ಜನತೆಗೆ ಎಚ್ಚರಿಸಿದರು.
ಕಳೆದ ೭೫ವರ್ಷಗಳಿಂದ ಧ್ವಜಗೌರವ ಸಲ್ಲಿಸುತ್ತಾ ಬಂದಿದ್ದೇವೆ. ಹಿರಿಯರಿಗೆ ನಮ್ಮ ಧೈರ್ಯ ಧೈರ್ಯ ಶಾಂತಿ, ಅಭಿವೃದ್ಧಿ ಸಂಕೇತ ಹಿಂದೂ,ಮುಸಲ್ಮಾನ್, ಕ್ರೈಸ್ತ, ಬೌದ್ಧ ರಾಜನಿರಲಿ, ಶ್ರೀಮಂತ,ಬಡವ ನಾಗಲಿ, ಯಾವುದೇ ಭಾಷಿಕನಿರಲಿ ಅವನು ಭಾರತೀಯನೆಂಬ ಏಕತೆ ಸಾರಲು ತ್ರಿವರ್ಣಧ್ವಜ ಸಂಕೇತವಾಗಿದೆ ಎಂದರು. ಎಲ್ಲಾಭಾರತೀಯರ ಮಹಾನ್ ಗ್ರಂಥ ಭಾರತ ಸಂವಿಧಾನ.೨೭೨ಜನರಿಗೆ ಕೃತಜ್ಞತೆ ಸಲ್ಲಿಸಬೇಕು.ಅದರಲ್ಲಿಯೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸೆಲ್ಯೂಟ್ ಹೊಡೆಯಬೇಕು ಎಂದು ತಿಳಿಸಿದರು. ವಿಜಯನಗರ ಶಾಸಕ ಕೃಷ್ಣಪ್ಪ ಮಾತನಾಡಿ, ಅನೇಕ ಮಹನೀಯರ ಹೋರಾಟ ಫಲ ಸ್ವಾತಂತ್ರ್ಯ. ಇಂಗ್ಲೆಂಡ್ ಗೆ ಅಲಿಖಿತ ಸಂವಿಧಾನ ಇಲ್ಲ. ಸಂವಿಧಾನದ ನೆರಳಿನಲ್ಲಿ ನಮ್ಮ ಭಾರತಕ್ಕೆ ವೈವಿಧ್ಯತೆಯಲ್ಲಿ ಏಕತೆ ರಾಷ್ಟ್ರ ಪ್ರೇಮದ ಸಂಕೇತವಾಗಿ ನನ್ನ ಕ್ಷೇತ್ರದಲ್ಲಿ ಅತಿ ಎತ್ತರದಲ್ಲಿ ತಿರಂಗ ಧ್ವಜಹಾರಿಸಿರುವುದು ಸಂತಸ ಮೂಡಿಸಿದೆ ಎಂದರು.
ಇದೇ ವೇಳೆಯಲ್ಲಿ ನ್ಯಾ.ನಾಗಮೋಹನ್ ದಾಸ್ ಧ್ವಜಸ್ಥಂಭ ನಿರ್ಮಾಣವಾಗಿರುವ ವೃತ್ತಕ್ಕೆ ಮಹಾತ್ಮ ಗಾಂಧಿ ವೃತ್ತ ಎಂದು ಹೆಸರು ಸೂಚಿಸಿದರು.ನಾಮಕರಣ ಮಾಡಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಸಂವಿಧಾನ ಓದು ಪುಸ್ತಕವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!