ಉದಯವಾಹಿನಿ, ಸಿರುಗುಪ್ಪ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭಾರತೀಯ ಜನತಾ ಪಾರ್ಟಿಯಲ್ಲಿ ಭಿನ್ನಮತ ಉಲ್ಬಣಗೊಳ್ಳತೊಡಗಿದೆಂಬ ಘಟನೆಗಳು ನಡೆಯತೊಡಗಿವೆ.
ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮತ್ತು ಪಕ್ಷಕ್ಕೆ ಸೇರಿದ ಲಿಂಗಾಯತ ಸಮುದಾಯದ ಹಲ ಮುಖಂಡರ ನಡುವೆ ಮುಸುಕಿನ ಗುದ್ದಾಟ ಶುರಯವಾದಂತಿದೆ.
ಸಿರುಗುಪ್ಪದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಜ 25 ರಂದು ಮಾಜಿ ಶಾಸಕರ ಎಂ ಎಸ್ ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ. ಪಕ್ಷದ ಸಿರುಗುಪ್ಪ ಮಂಡಲದ ನೂತನ ಅಧ್ಯಕ್ಷರನ್ನಾಗಿ ಕುಂಟನಾಳ್ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ನೇಮಕ ಮಾಡಿ ಅವರಿಗೆ ಪಕ್ಷದ ಧ್ವಜ ನೀಡಿ ಗೌರವಿಸಿದ್ದಾರಂತೆ.
ಅದೇರೀತಿ ಉಪಾಧ್ಯಕ್ಷರನ್ನಾಗಿ ಪೂಜಾರಿ ಗಾದಿಲಿಂಗಪ್ಪ ಮತ್ತು ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ಬೆಳಗಲ್ ಬಸವರಾಜ ಮತ್ತು ಪಕೀರಪ್ಪ ಇವರನ್ನು, ಕಾರ್ಯದರ್ಶಿಯಾಗಿ ಕರೂರು ಆದೆಪ್ಪ ಅಂಗಡಿ ಅವರನ್ನು, ತಾಲೂಕು ಎಸ್ ಸಿ ಮೋರ್ಚಾ ಅಧ್ಯಕ್ಷರನ್ನಾಗಿ ರಾರವಿ ಮಾರೇಶ ಹಾಗೂ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಕರೂರ್ ಶಂಕರ್ ರೆಡ್ಡಿ, ಜಿಲ್ಲಾ ಕಾರ್ಯದರ್ಶಿಯಾಗಿ ಸದಾಶಿವ ಅವರನ್ನು ಆಯ್ಕೆ ಮಾಡಲಾಗಿದೆಯಂತೆ.
ಈ ಸಂದರ್ಭದಲ್ಲಿ ಮುಖಂಡರಾದ ದೇಶನೂರು ಹುಲಗಪ್ಪ, ನಗರಸಭಾ ಸದಸ್ಯರಾದ ಮೇಕಲ್ ವೀರೇಶ, ಮಹಾದೇವ,ಮೋಹನ್ ರೆಡ್ಡಿ, ಬಿ. ಈರಣ್ಣ, ಕುಮಾರಪ್ಪ, ದೊಡ್ಡ ಹುಲಗಪ್ಪ, ನಟರಾಜ್ ವಿಕ್ರಂ, ವೈ. ಡಿ. ವೆಂಕಟೇಶ ನಿಟ್ಟೂರು ರಾಮಮೂರ್ತಿ ಮತ್ತಿತರ ಮುಖಂಡರು ಇದ್ದ ಬಗ್ಗೆ ಪೋಟೋ ಸಮೇತ ಫೇಸ್ ಬುಕ್ ನಲ್ಲಿ ಹರಿದುದಾಡುತ್ತಿದೆ.
ಇನ್ನು ಪಕ್ಷದಲ್ಲಿನ ಜಿಲ್ಲಾ ಸಮಿತಿಯಲ್ಲಿ ಲೋಕಸಭಾ ಚುನಾವಣೆ ವರೆಗೆ ಬದಲಾವಣೆ ಬೇಡ, ಯಾರಿಗೆ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂಬುವವರನ್ನು ಮಾತ್ರ ಬದಲಿ ಮಾಡಿ ಎಂದು ವರಿಷ್ಟರು ಹೇಳಿದ್ದಾರಂತೆ. ಸಾಮಾನ್ಯವಾಗಿ ಈ ನೇಮಕ ಪ್ರಕ್ರಿಯೆ ಆಯಾ ಕ್ಷೇತ್ರ ಶಾಸಕರ, ಮಾಜಿ ಶಾಸಕರ, ಮುಖಂಡರ ಅಭಿಪ್ರಾಯ ಪಡೆದು ಜಿಲ್ಲಾ ಸಮಿತಿಯ ಅಧ್ಯಕ್ಷರು ಘೋಷಣೆ ಮಾಡಬೇಕು. ಆದರೆ ಇದು ಹಾಗಾಗಿಲ್ಲ.
ಹೀಗಾಗಿ ಪಜ್ಷದಲ್ಲಿ ಭಿನ್ನಮತದ, ಅಸಮಾಧಾನದ ಸ್ವರ ಕೆರಳಿ ಬಂದಿದೆ. ಈ ಬಗ್ಗೆ ಜಿಲ್ಲಾ ಸಮಿತಿ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
