ಉದಯವಾಹಿನಿ,ಚಿಂಚೋಳಿ: ಬಸವಧಿ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರು,12ನೇ ಶತಮಾನದಲ್ಲಿ ಜಾತಿ ನಿರ್ಮೂಲನೆ ಮಾಡಲು ಅನೇಕ ಪ್ರಯತ್ನ ಮಾಡಿ,ಕಲ್ಯಾಣ ಕ್ರಾಂತಿಯ ಸಮಯ ಶರಣರ ಧರ್ಮ ಸಂರಕ್ಷಣೆ ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತಿಕೊಂಡು ಬಸವಣ್ಣ,ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಡಿವಾಳ ಮಾಚಿದೇವರು ಶರಣ ಸಮೂಹದ ಭೀಮ ರಕ್ಷೆಯಾಗಿದ್ದರು ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು. ಪಟ್ಟಣದ ತಹಸೀಲ್ ಸಭಾಂಗಣದಲ್ಲಿ ತಾಲ್ಲೂಕಾಡಳಿತ ವತಿಯಿಂದ ಸರಳವಾಗಿ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ,ಜಾತೀಯತೆ,ಮೇಲು ಕೀಳು ತಾರತಮ್ಯ,ಅಸ್ಪ್ರುಶ್ಯತೆ,ಮೂಢ ನಂಬಿಕೆಗಳ ಸೃಷ್ಟಿ,ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಕೂಡಿದ ಸಂದರ್ಭದಲ್ಲಿ ಹೋರಾಟ ಮಾಡಿದವರು ಮಾಚಿದೇವರು.ಇವುಗಳೆಲ್ಲವೂಗಳಿಂದ ಮಹಿಳೆಯರು,ವೃತ್ತಿ ನಿರತ ಶ್ರಮಜೀವಿಗಳು,ಬಡವರು,ದೀನ ದಲಿತರು ನಿರಾಶೆ ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದ ಸಂದರ್ಭದಲ್ಲಿ ಆಗ ಮಾಚಿದೇವರು ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಪ್ರಕಾಶಮಾನವಾಗಿ ಕಂಡು ಬಂದಿದರು.ಮಾಚಿದೇವರು 250ಕ್ಕಿಂತ ಹೆಚ್ಚು ವಚನಗಳು ಬರೆದಿದ್ದು,ಮಾಚಿದೇವರು ಬಟ್ಟೆ ಮಡಿ ಮಾಡುವ ಕಾಯಕ ಜೋತೆ ಬಸವಣ್ಣನವರ ಹಾಗೂ ಅನೇಕ ಶರಣರ ಒಡನಾಡಿಯಾಗಿದ್ದರು.ರಾಮಾಯಣ ಕಾಲದಿಂದ ಮಡಿವಾಳ ಸಮಾಜವಿದ್ದು ಸಮಾಜದ ಬಾಂಧವರು ಮಾಚಿದೇವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದರೆ ಜೀವನ ಪಾವನವಾಗುತ್ತದೆ ಎಂದರು.
ಕಾಶಿನಾಥ ಮಡಿವಾಳ,ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ದೇಗಲಮಡಿ ಮಾತನಾಡಿದರು.ಈ ಸಂದರ್ಭದಲ್ಲಿ ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಮಡಿವಾಳ ಸಮಾಜದ ತಾಲ್ಲೂಕಾಧ್ಯಕ್ಷ ಮಧುಕರ ಕೊಳ್ಳೂರಕರ್,ಕಲ್ಲಪ್ಪ ಅಣವಾರ,ರವಿಪಾಟೀಲ,ಸುಭಾಷ್ ನಿಡಗುಂದಾ,ಭೀಮರೆಡ್ಡಿ,ಕಿರಣಕುಮಾರ ಮಡಿವಾಳ,ಅನೀಲ,ರಮೇಶ,ಬಸಪ್ಪ,ನಾಗಣ್ಣ ಮಡಿವಾಳ,ಜಗನ್ನಾಥ,ಹಣಮಂತ,ಪುಂಡಲೀಕ್,ನಾಗಣ್ಣ,ಮಹಾಂತೇಶ,ಅನೇಕ ಸಮಾಜ ಬಾಂಧವರು ಇದ್ದರು.
ಮಡಿವಾಳ ಸಮಾಜಕ್ಕೆ ಸರ್ಕಾರದಿಂದ 50ಕೋಟಿ ರೂ.ಅನುದಾನ ಮೀಸಲಿಡಬೇಕು,ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಹೆಸರಿನಲ್ಲಿ ಸರ್ಕಾರದಿಂದ 2ಏಕರೆ ಜಮೀನು ನೀಡಿ ಭವನ ನಿರ್ಮಾಣ ಮಾಡಿಕೊಡಬೇಕು,ಬಟ್ಟೆ ಮಡಿಕಟ್ಟುವ ಕಟ್ಟೆಗಳು ನಿರ್ಮಿಸಿಕೊಡಬೇಕು,ಮಡಿವಾಳ ಸಮಾಜಕ್ಕೆ ಸರ್ಕಾರದಿಂದ ಕಾಯಕ ಸಾಮಾಗ್ರಿಗಳನ್ನು ವಿತರಿಸಬೇಕು,ಮಕ್ಕಳಿಗೆ ಸಮಾಜದ ತಂದೆತಾಯಂದಿರು ಉನ್ನತ ಶಿಕ್ಷಣ ನೀಡಬೇಕು ಆಗ ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ:- ಮಧುಕರ್ ಕೊಳ್ಳೂರಕರ್  ಅಧ್ಯಕ್ಷರು ಮಡಿವಾಳ ಸಮಾಜ ಚಿಂಚೋಳಿ.

Leave a Reply

Your email address will not be published. Required fields are marked *

error: Content is protected !!