
ಉದಯವಾಹಿನಿ,ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಶ್ರೀಮತಿ ಡಾ. ನಳಿನಾಕ್ಷಿ ಇವರಿಗೆ ಶುಕ್ರವಾರ ರಾಜ್ಯದ ಹೆಸರಾಂತ ಪ್ರಾದೇಶಿಕ ದಿನಪತ್ರಿಕೆ ಉದಯವಾಹಿನಿ ಯ ನೂತನ ವರ್ಷ 2024ರ ಕ್ಯಾಲೆಂಡರ್ ನೀಡಿ ಗೌರವಿಸಲಾಯಿತು. ಕ್ಯಾಲೆಂಡರ್ ಸ್ವೀಕರಿಸಿ ಉದಯವಾಹಿನಿ ಪತ್ರಿಕೆ ದೀನ ದಲಿತರ ಸಂಕಷ್ಟಗಳಿಗೆ ದ್ವನಿಯಾಗಿ ಬೆಳೆಯಲಿ ಜಾತ್ಯತೀತ ಮನೋಭಾವ, ಸಾಮಾಜಿಕ ಸೌಹಾರ್ದ, ದೀನದಲಿತರ ಹಿತಾಸಕ್ತಿಯ ಹಂಬಲ, ಮಹಿಳಾ ಅಭ್ಯುದಯ ಹಾಗೂ ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಗಲಿ ಪತ್ರಿಕೆಯ ಸಂಪಾದಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.
