
ಉದಯವಾಹಿನಿ, ಶಹಾಪುರ : ನಗರದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾರೋಪದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾಹನ ಚಾಲನಾ ಕೌಶಲ್ಯ ತರಬೇತಿ ಶಿಬಿರ ಕಾರ್ಯಕ್ರಮ ನಡೆಸಲಾಯಿತು.
ಸುರಕ್ಷತಾ ಮಾಸಚರಣೆಯಲ್ಲಿ ಕಲಬುರ್ಗಿ ಜಂಟಿ ಸಾರಿಗೆ ಆಯುಕ್ತರು ಸಿದ್ದಪ್ಪ ಕಲ್ಲೇರಿ ಹಾಗೂ ಬಸವರಾಜ್ ಕಡ್ಲಿ ಇವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಸಂಚಾರಿ ನಿಯಮ ಕಿರು ಪುಸ್ತಕವನ್ನು ರಾಜ್ಯಾಧ್ಯಕ್ಷರಾದ ಆನಂದ ವಿ. ಪಾಟೀಲ್ ಇವರು ಬಿಡುಗಡೆ ಮಾಡಿದರು.ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ಚಿಹ್ನೆಗಳ ಪಾಲನೆ ಮಾಡಬೇಕು. ರಸ್ತೆ ಸುರಕ್ಷತೆಯಲ್ಲಿ ಚಾಲಕನ ಕರ್ತವ್ಯ ಬಹಳ ಮುಖ್ಯವಾಗಿದೆ. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಬಾರದು. ಸಂಚಾರಿ ಚಿಹ್ನೆಗಳು, ಸಂಕೇತಗಳು, ನಿಯಮ ತಿಳಿದು ಇವುಗಳನ್ನು ತಪ್ಪದೇ ಪಾಲಿಸಬೇಕೆಂದು RTO ಮಿಲಿಂದಕುಮಾರ ಯಾದಗಿರಿ ಇವರು ಸೂಚಿಸಿದರು.ರಾಜ್ಯ ಉಪಾಧ್ಯಕ್ಷರಾದ ಯಲ್ಲಪ್ಪ ಬಿ. ದೊಡಮನಿ ಮಾತನಾಡಿ,ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಚಾಲಕರ ಕಣ್ಣು ಕುಕ್ಕದಂತೆ ಹೆಡ್‌ಲೈಟ್ ಡಿಪ್ಪರನ್ನು ಬಳಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ವಾಹನಗಳ ಮಧ್ಯೆ ವೇಗಕ್ಕೆ ತಕ್ಕ ಅಂತರವನ್ನು ಕಾಪಾಡಿಕೊಂಡು ತಿರುವು ರಸ್ತೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಾದಚಾರಿಗಳು ರಸ್ತೆಯ ಎಡ ಬದಿಯಿಂದಲೇ ಚಲಿಸಬೇಕು. ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ಬಲಭಾಗದಿಂದ ಹಾದು ಹೋಗಲು ಬಿಡಿ, ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನವು ಹೋದ ಮೇಲೆ ಆ ರಸ್ತೆ ಪ್ರವೇಶಿಸಿರಿ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮರಳು ಸಿದ್ದಯ್ಯ ಹಿರೇಮಠ್, ಚಂದ್ರಶೇಖರ್ ಅರಬೋಳ, ಎಸ್. ಎಮ್. ಪಾಟೀಲ್, ಮಂಗಿಲಾಲ್ ಮಗನಲಾಲ್ ಜೈನ, ಭೀಮನಗೌಡ ಬಿರಾದಾರ್, ಶಂಕರ ಸಿಂಘೆ, ಜುಬೀರ್ ಹೈಮದ್, ಅಂಬಯ್ಯ ಬಡಿಗೇರ್, ನರಸಯ್ಯ ಕಲಾಲ್, ಬಸಲಿಂಗಪ್ಪಗೌಡ, ಅಬ್ದುಲ್ ಆಜೀಜ್ ಹಾಗೂ ಇತರರು ಹಾಜರಿದ್ದರು.
